ಸಿನಿಮಾ ಸುದ್ದಿ'ಕುಲದಲ್ಲಿ ಕೀಳ್ಯಾವುದೋ' ಚಿತ್ರದ ಮೂಲಕ ಶ್ರೇಯಸ್ ರಾಜ್ ಶೆಟ್ಟಿ ನಿರ್ದೇಶಕರಾಗಿ ಪದಾರ್ಪಣೆ; ಸೋನಲ್ ಮೊಂತೆರೋ ನಾಯಕಿ
ಪಂಚತಂತ್ರ, ಗಾಳಿಪಟ 2, ಗರಡಿ ಮತ್ತು ಮುಂಬರುವ ಕರಟಕ–ದಮನಕ ಮುಂತಾದ ಚಿತ್ರಗಳಲ್ಲಿ ನಿರ್ದೇಶಕ ಯೋಗರಾಜ್ ಭಟ್ ಅವರಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ ಶ್ರೇಯಸ್ ರಾಜ್ ಶೆಟ್ಟಿ ಇದೀಗ ಪೂರ್ಣ ಪ್ರಮಾಣದಲ್ಲಿ ನಿರ್ದೇಶಕನ ಜವಾಬ್ದಾರಿ ಹೊರಲು ಸಿದ್ಧರಾಗಿದ್ದಾರೆ. ಚಿತ್ರಕ್ಕೆ 'ಕುಲದಲ್ಲಿ ಕೀಳ್ಯಾವುದೋ' ಎಂದು ಹೆಸರಿಸಲಾಗಿದೆ.