Shramik train

ಬೆಂಗಳೂರು: ತಪ್ಪು ಶ್ರಮಿಕ್ ರೈಲು ಹತ್ತಿದ ಮಧ್ಯಪ್ರದೇಶದ ವಲಸೆ ಕಾರ್ಮಿಕರು ತಲುಪಿದ್ದು ಉತ್ತರಪ್ರದೇಶ!
ರಾಜಧಾನಿ ಬೆಂಗಳೂರಿನಿಂದ ಮಧ್ಯಪ್ರದೇಶಕ್ಕೆ ತೆರಳುತ್ತಿದ್ದ 29 ವಲಸಿಗರ ಗುಂಪು ತಪ್ಪಾಗಿ ವಿಶೇಷ ಶ್ರಮಿಕ ರೈಲು ಹತ್ತಿದ್ದರಿಂದ ಶುಕ್ರವಾರ ಬೆಳಗ್ಗೆ ಉತ್ತರ ಪ್ರದೇಶಕ್ಕೆ ತಲುಪಿದ್ದಾರೆ

ಮಗುವಿಗೆ ಹಾಲಿನ ಪ್ಯಾಕೆಟ್ ನೀಡಲು ರೈಲಿನ ಹಿಂದೆ ಮಿಂಚಿನಂತೆ ಓಡಿದ ಆರ್ ಪಿಎಫ್ ಸಿಬ್ಬಂದಿಗೆ ನಗದು ಬಹುಮಾನ!
ಚಲಿಸುತ್ತಿದ್ದ ರೈಲಿನೊಂದಿಗೆ ಮಿಂಚಿನಂತೆ ಓಡಿ ಹಸಿದ ಮಗುವಿಗೆ ಅಗತ್ಯವಿದ್ದ ಹಾಲು ತಲುಪಿಸಿದ ಆರ್ ಪಿಎಫ್ ಸಿಬ್ಬಂದಿ ಸಾಹಕ್ಕೆ ರೈಲ್ವೇ ಇಲಾಖೆ ಶ್ಲಾಘನೆ ವ್ಯಕ್ತಪಡಿಸಿದ್ದು, ಸಿಬ್ಬಂದಿಗೆ ನಗದು ಬಹುಮಾನ ನೀಡುವುದಾಗಿ ಘೋಷಣೆ ಮಾಡಿದೆ.

ಶ್ರಮಿಕ್ ರೈಲಿನಲ್ಲಿ ವಲಸೆ ಕಾರ್ಮಿಕ ಸಾವು: ಶವದೊಂದಿಗೆ ಬಂಗಾಳಕ್ಕೆ ಪ್ರಯಾಣಿಸಿದ ಸಹ ಪ್ರಯಾಣಿಕರು!
ರಾಜಸ್ಥಾನದಿಂದ ಪಶ್ಚಿಮ ಬಂಗಾಳಕ್ಕೆ ತೆರಳುತ್ತಿದ್ದ ಶ್ರಮಿಕ್ ವಿಶೇಷ ರೈಲೊಂದರಲ್ಲಿ ಪ್ರಯಾಣಿಸುತ್ತಿದ್ದ 50 ವರ್ಷದ ವಲಸೆ ಕಾರ್ಮಿಕರೊಬ್ಬರು ಮೃತಪಟ್ಟಿದ್ದಾರೆ. ಆತನ ಶವದೊಂದಿಗೆ ಸುಮಾರು 8 ಗಂಟೆಗಳ ಕಾಲ ಪ್ರಯಾಣಿಸಿದ ಸಹ ಪ್ರಯಾಣಿಕರು ಇದೀಗ ಭೀತಿಗೊಂಡಿರುವುದಾಗಿ ಪೊಲೀಸರು ಹೇಳಿದ್ದಾರೆ.

ಉತ್ತರ ಪ್ರದೇಶ: ಶ್ರಮಿಕ್ ರೈಲಿನ ಶೌಚಾಲಯದಲ್ಲಿ ವಲಸೆ ಕಾರ್ಮಿಕನ ಕೊಳೆತ ಶವ ಪತ್ತೆ
ಲಾಕ್ ಡೌನ್ ನಿಂದಾಗಿ ವಿವಿಧ ನಗರಗಳಲ್ಲಿ ಸಿಲುಕಿದ್ದ ವಲಸೆ ಕಾರ್ಮಿಕರ ಪ್ರಯಾಣಕ್ಕಾಗಿ ಕೇಂದ್ರ ಸರ್ಕಾರ ಆರಂಭಿಸಿದ್ದ ಶ್ರಮಿಕ್ ವಿಶೇಷ ರೈಲಿನ ಶೌಚಾಲಯದಲ್ಲಿ ವಲಸೆ ಕಾರ್ಮಿಕನ ಕೊಳೆತ ಶವ ಪತ್ತೆಯಾಗಿದ್ದು, ಹಲವು ದಿನಗಳ ಹಿಂದೆಯೇ ಕಾರ್ಮಿಕ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.

ಮಧ್ಯ ಪ್ರದೇಶ: ಶ್ರಮಿಕ್ ರೈಲಿನಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ
ಶ್ರಮಿಕ್ ವಿಶೇಷ ರೈಲಿನಲ್ಲಿ ಗುಜರಾತ್‌ನಿಂದ ಉತ್ತರ ಪ್ರದೇಶದ ತನ್ನ ಊರಿಗೆ ಪ್ರಯಾಣಿಸುತ್ತಿದ್ದ 28 ವರ್ಷದ ಮಹಿಳೆ ಮಾರ್ಗಮಧ್ಯೆಯೇ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆಂಫಾನ್ ಚಂಡಮಾರುತ:ಶ್ರಮಿಕ್ ರೈಲನ್ನು 3 ದಿನ ಸ್ಥಗಿತಗೊಳಿಸಿ ಎಂದು ಕೇಂದ್ರವನ್ನು ಕೇಳಿಕೊಂಡ ಒಡಿಶಾ ಸರ್ಕಾರ
ಆಂಫಾನ್ ಚಂಡಮಾರುತ ಹಿನ್ನೆಲೆಯಲ್ಲಿ ನಾಳೆಯಿಂದ ಮೂರು ದಿನಗಳ ಕಾಲ ಶ್ರಮಿಕ್ ವಿಶೇಷ ರೈಲು ಸೇವೆಯನ್ನು ಸ್ಥಗಿತಗೊಳಿಸುವಂತೆ ಒಡಿಶಾ ಸರ್ಕಾರ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.

10 ಸಾವಿರ ವಲಸೆ ಕಾರ್ಮಿಕರನ್ನು ಹೊತ್ತೊಯ್ದ 7 ಶ್ರಮಿಕ್ ವಿಶೇಷ ರೈಲು
ಲಾಕ್ ಡೌನ್ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಸಿಲುಕಿಕೊಂಡಿದ್ದ 10 ಸಾವಿರ ವಲಸೆ ಕಾರ್ಮಿಕರನ್ನು ಶ್ರಮಿಕ್ ವಿಶೇಷ ರೈಲಿನಲ್ಲಿ ದೇಶದ ವಿವಿಧ ರಾಜ್ಯಗಳಿಗೆ ಕಳುಹಿಸಲಾಗುತ್ತಿದೆ.

ಶ್ರಮಿಕ ರೈಲಿನಲ್ಲಿ ಪ್ರಯಾಣಿಸುತ್ತಿದ್ದ 34 ವರ್ಷದ ವಲಸೆ ಕಾರ್ಮಿಕ ಸಾವು
ಪುಣೆಯಿಂದ ಪ್ರಯಾಗ್ ರಾಜ್ ಗೆ ಶ್ರಮಿಕ ವಿಶೇಷ ರೈಲಿನಲ್ಲಿ ಪ್ರಯಾಣಿಸುತ್ತಿದ್ದ 34 ವರ್ಷದ ವಲಸೆ ಕಾರ್ಮಿಕರೊಬ್ಬರು ಸೋಮವಾರ ಮೃತಪಟ್ಟಿದ್ದು, ಮೃತ ದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ ಎಂದು ಮಂಗಳವಾರ ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರಿನಿಂದ ವಲಸೆ ಕಾರ್ಮಿಕರನ್ನು ಹೊತ್ತೊಯ್ದ ಶ್ರಮಿಕ್ ವಿಶೇಷ ರೈಲು
ಬೆಂಗಳೂರಿನಲ್ಲಿರುವ ಬಿಹಾರ, ಒಡಿಶಾ ಮತ್ತು ಜಾರ್ಖಂಡ್‌ನ ವಲಸೆ ಕಾರ್ಮಿಕರನ್ನು ಅವರವರ ಊರಿಗೆ ಕಳುಹಿಸಲು ರೈಲ್ವೆ ವಿಭಾಗವು ಭಾನುವಾರ ನಾಲ್ಕು ವಿಶೇಷ ರೈಲುಗಳನ್ನು ತ್ವರಿತವಾಗಿ ಸಂಚಾರ ಆರಂಭಿಸಿದೆ.

