ದೇಶಎಲ್ಗಾರ್ ಪರಿಷತ್ ಪ್ರಕರಣ: ಕಾರ್ಯಕರ್ತೆ ಶೋಮಾ ಸೇನ್ಗೆ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು
ಎಲ್ಗಾರ್ ಪರಿಷತ್– ಮಾವೋವಾದಿಗಳ ಜೊತೆಗಿನ ಸಂಪರ್ಕ ಪ್ರಕರಣದಲ್ಲಿ ಬಂಧಿತರಾಗಿದ್ದ ಶೋಮಾ ಕಾಂತಿ ಸೇನ್ ಅವರಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ಜಾಮೀನು ಮಂಜೂರು ಮಾಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 2018ರ ಜೂನ್ 6 ರಂದು ಇಂಗ್ಲಿಷ್ ಸಾಹಿತ್ಯ ಪ್ರಾಧ್ಯಾಪಕಿ ಮತ್ತು ಮಹಿಳಾ ಹಕ್ಕುಗಳ ಕಾರ್ಯಕರ್ತೆ ಸೇನ್ ಅವರನ್ನು ಬಂಧಿಸಲಾಯಿತು.