ಸಂಚಯದಿಗ್ದರ್ಶಕ ಪುಟ್ಟಣ್ಣ ಕಣಗಾಲರು ಹೇಳದೇ ಉಳಿಸಿ ಹೋದ ನೂರೆಂಟು ಕಥೆಗಳು ಕೊಡಗಿನಲಿ ಜೀವಂತ
ಪುಟ್ಟಣ್ಣ ಎಂದಾಕ್ಷಣ ಮಣಜೂರು ಅಜ್ಜಿಮನೆಯ ಮಣ್ಣಿನ ಗೋಡೆಗಳ ನಡುವಿದ್ದ ಬೀಟೆ ಮಂಚದ ಮೇಲೆ ಅಪ್ಪ ನ್ಯಾಷನಲ್ ಟೇಪ್ ರೆಕಾರ್ಡರ್ ಇಟ್ಟುಕೊಂಡು ಗೊಗ್ಗರು ದನಿಯಲ್ಲಿ ಕೇಳಿಸುತ್ತಿದ್ದ 'ಸಂದೇಶ ಮೇಘ ಸಂದೇಶ' ಹಾಡು ನೆನಪಾಗುತ್ತದೆ. ನದಿ ತಟದಲ್ಲಿ, ಮರಗಳ ನಡುವೆ ಪ್ರೇತಕಳೆಯಿಂದ ಕಲ್ಪನಾ ಓಡುವುದು ನೆನಪಾಗುತ್ತದೆ.