ದೇಶಬಲಿಷ್ಠ ನಾಯಕತ್ವ ಇಲ್ಲದಿದ್ದರೆ ಅಫ್ತಾಬ್ನಂಥವರು ಹುಟ್ಟುತ್ತಲೇ ಇರುತ್ತಾರೆ: ಅಸ್ಸಾಂ ಸಿಎಂ ಹಿಮಾಂತ ಬಿಸ್ವ ಶರ್ಮಾ!
ಇಡೀ ದೇಶವನ್ನೇ ಬೆಚ್ಚಿ ಬೀಳಿಸಿರುವ ಶ್ರದ್ಧಾ ವಾಲ್ಕರ್ ಕೊಲೆ ಪ್ರಕರಣ ಇದೀಗ ಗುಜರಾತ್ ಚುನಾವಣೆಯ ವಸ್ತುವಾಗಿದ್ದು, ಇದೇ ಪ್ರಕರಣವನ್ನು ಮುಂದಿಟ್ಟುಕೊಂಡು ಪ್ರತಿಪಕ್ಷಗಳ ವಿರುದ್ಧ ಕಿಡಿಕಾರಿರುವ ಅಸ್ಸಾಂ ಸಿಎಂ ಹಿಮಾಂತ ಬಿಸ್ವಾ ಶರ್ಮಾ ದೇಶಕ್ಕೆ ಬಲಿಷ್ಠ ನಾಯಕ ಇಲ್ಲದೇ ಹೋದರೆ ಅಫ್ತಾಬ್ನಂಥವರು ಪ್ರತೀ ನಗರದಲ್ಲಿ ಹುಟ್ಟುತ್ತಾರೆ ಎಂದು ಹೇಳಿದ್ದಾರೆ.