ದೇಶದಿಶಾ, ಶಂತನು, ನಿಕಿತಾ 'ಟೂಲ್ ಕಿಟ್' ಸಿದ್ದಪಡಿಸಿ, ಗ್ರೇಟಾಗೆ ಕಳುಹಿಸಿದ್ದಾರೆ: ದೆಹಲಿ ಪೊಲೀಸರು
ಬೆಂಗಳೂರಿನ ಪರಿಸರ ಹೋರಾಟಗಾರ್ತಿ ದಿಶಾ ರವಿ ಅವರು ಶಂತನು ಹಾಗೂ ನಿಖಿತಾ ಜಾಕೋಬ್ ಅವರೊಂದಿಗೆ ಸೇರಿ ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ ಟೂಲ್ ಕಿಟ್ ಸಿದ್ದಪಡಿಸಿ ಅದನ್ನು ಅಂತಾರಾಷ್ಟ್ರೀಯ ಪರಿಸರ ಹೋರಾಟಗಾರ್ತಿ ಗ್ರೇಟಾ ಥನ್ಬರ್ಗ್ ಅವರಿಗೆ ಕಳುಹಿಸಿದ್ದಾರೆ ಎಂದು ಸೋಮವಾರ ದೆಹಲಿ ಪೊಲೀಸರು ಆರೋಪಿಸಿದ್ದಾರೆ.