ರಾಜ್ಯಶಬೇ ಬರಾಅತ್, ಗುಡ್ಫ್ರೈಡೆ ಸಾಮೂಹಿಕ ಪ್ರಾರ್ಥನೆಗೆ ಅವಕಾಶವಿಲ್ಲ; ಉಲ್ಲಂಘಿಸಿದ್ರೆ ಮುಲಾಜಿಲ್ಲದೆ ಕಠಿಣ ಕ್ರಮ: ಭಾಸ್ಕರ್ ರಾವ್
ಲಾಕ್ಡೌನ್ ಹಿನ್ನೆಲೆಯಲ್ಲಿ ಶಬೆ ಬರಾಅತ್ ಹಾಗೂ ಗುಡ್ಫ್ರೈಡೆಗಾಗಿ ಯಾರು ಕೂಡ ಮಸೀದಿ, ಚರ್ಚ್ಗಳಿಗೆ ತೆರಳದೆ ಮನೆಯಲ್ಲಿಯೇ ಪ್ರಾರ್ಥನೆ ಸಲ್ಲಿಸಬೇಕು. ಅನಗತ್ಯವಾಗಿ ಚರ್ಚ್, ಮಸೀದಿಗಳಲ್ಲಿ ಸೇರಿದರೆ ಮುಲಾಜಿಲ್ಲದೆ ಬಂಧಿಸಲಾಗುವುದು ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಎಚ್ಚರಿಕೆ ನೀಡಿದ್ದಾರೆ.