ದೇಶಹರಿಯಾಣ: ಪೊಲೀಸ್ ಠಾಣೆಯಲ್ಲಿ ಆರೋಪಿಗೆ ಚಹಾ ಸೇವೆ, ಇಬ್ಬರು ಪೊಲೀಸರ ಅಮಾನತು
ವಂಚನೆಯ ಆರೋಪಿಗೆ ಟೀ ಪೂರೈಸಿದ ವಿಡಿಯೋ ವೈರಲ್ ಆದ ನಂತರ ಇಬ್ಬರು ಪೊಲೀಸರನ್ನು ಹರಿಯಾಣದ ಗೃಹ ಸಚಿವ ಅನಿಲ್ ವಿಜ್ ಸೇವೆಯಿಂದ ಅಮಾನತು ಪಡಿಸಿದ್ದಾರೆ. ಕೈಥಲ್ ಜಿಲ್ಲೆಯ ಪುಂದ್ರಿ ಪೊಲೀಸ್ ಠಾಣೆಯಲ್ಲಿ ಈ ಘಟನೆ ನಡೆದಿದೆ. ದೂರುದಾರ ಮಹಿಳೆಯೊಬ್ಬರು ವಿಡಿಯೋ ತೋರಿಸಿದ ಕೂಡಲೇ ಪೊಲೀಸರನ್ನು ಸೇವೆಯಿಂದ ಅಮಾನತು ಮಾಡುವಂತೆ ಗೃಹ ಸಚಿವರು ಆದೇಶಿಸಿದ್ದಾರೆ.