ರಾಜ್ಯಬೆಂಗಳೂರು: ACS ಅಧಿಕಾರಿಯ ನಕಲಿ ಪತ್ರ ಹಲವು ಇಲಾಖೆಗಳಿಗೆ ರವಾನೆ; ಗೊಂದಲ ಸೃಷ್ಟಿ!
ಅಪರಿಚಿತ ದುಷ್ಕರ್ಮಿಯೊಬ್ಬ ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಎಸಿಎಸ್) ಅವರ ಆಪ್ತ ಕಾರ್ಯದರ್ಶಿಯ ಲೆಟರ್ಹೆಡ್ ಬಳಸಿ ನಕಲಿ ಪತ್ರವನ್ನು ಸೃಷ್ಟಿಸಿ, ರಾಷ್ಟ್ರೀಯ ಆರೋಗ್ಯ ಮಿಷನ್ (ಎನ್ಎಚ್ಎಂ) ಕಾರ್ಯಕರ್ತರ ನೌಕರಿ ಕಾಯಂಗೊಳಿಸಲು ಶಿಫಾರಸ್ಸು ಮಾಡಿ ಹಲವು ಇಲಾಖೆಗಳಿಗೆ ಕಳುಹಿಸಿದ್ದಾನೆ.