ದೇಶಹಳೆಯ ಸಿಂಹಗಳಿಗೆ ಹೊಸ ಹೆಸರಿಟ್ಟು ಮಾರಾಟ: ಪ್ರಧಾನಿ 'ಸ್ವಾವಲಂಬಿ ಇಂಡಿಯಾ ಮಿಷನ್' ಘೋಷಣೆಗೆ ಶಶಿ ತರೂರ್ ತಿರುಗೇಟು
20 ಲಕ್ಷ ಕೋಟಿ ರೂ.ಗಳ ಆರ್ಥಿಕ ಪ್ಯಾಕೇಜ್ ಮತ್ತು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ “ಸ್ವಾವಲಂಬಿ ಭಾರತ ಮಿಷನ್” ನಲ್ಲಿ ಹೊಸತೇನೂ ಇಲ್ಲ, ಈ ಮುನ್ನ ಜಾರಿಯಲ್ಲಿದ್ದ "ಮೇಕ್ ಇನ್ ಇಂಡಿಯಾ" ಉಪಕ್ರಮವನ್ನೇ ಮತ್ತೊಮ್ಮೆ ಮೋದಿ ಉಚ್ಚರಿಸಿದ್ದಾರೆ ಎಂದು ಕಾಂಗ್ರೆಸ್ ಮುಖಂಡ, ತಿರುವನಂತಪುರಂ ಸಸದರಾದ ಶಶಿ ತರೂರ್ ಹೇಳಿದ್ದಾರೆ.