ರಾಜ್ಯವಿಧಾನಸಭೆಯಲ್ಲಿ ಅಂಗೀಕರಿಸಿದ ಮಸೂದೆಗಳಲ್ಲಿ ಪರಿಶೀಲನೆಗೆ ಕಳುಹಿಸಿದ್ದು ಶೇ.5ಕ್ಕಿಂತ ಕಡಿಮೆ!
ಕರ್ನಾಟಕ ವಿಧಾನಸಭೆ ಚುನಾವಣೆ 2023ಕ್ಕೆ ಇನ್ನೊಂದು ವಾರ ಬಾಕಿ. ರಾಜ್ಯದ ಪ್ರಮುಖ ಮೂರು ಪಕ್ಷಗಳ ನಾಯಕರ ಅಬ್ಬರದ ಪ್ರಚಾರ, ಚುನಾವಣಾ ಪ್ರಣಾಳಿಕೆ ಬಿಡುಗಡೆ ಸಾಗುತ್ತಿದೆ. 15ನೇ ವಿಧಾನಸಭೆಯ ಕಾರ್ಯನಿರ್ವಹಣಾ ವರದಿಯನ್ನು ತ್ವರಿತವಾಗಿ ಅವಲೋಕಿಸಿದರೆ, ಬಿಜೆಪಿ ಸರ್ಕಾರವು ತನ್ನ ಅಧಿಕಾರಾವಧಿಯಲ್ಲಿ ಯಾವುದೇ ಚರ್ಚೆಯಿಲ್ಲದೆ ಹಲವಾರು ಮಸೂದೆಗಳನ್ನು ಅಂಗೀಕರಿಸಿದೆ.