ರಾಜ್ಯಮೆಟ್ರೊ ರೈಲಿನಲ್ಲಿ ಸಿಸಿಟಿವಿ ಕ್ಯಾಮರಾ ಮುಚ್ಚಿದ ಇಬ್ಬರು ಶಾಲಾ ಬಾಲಕರು: ಮೆಟ್ರೊ ಕಾಯ್ದೆಯಡಿ ಕೇಸು ದಾಖಲು
ಗ್ರೀನ್ ಲೈನ್ನಲ್ಲಿ ಮೆಟ್ರೋ ರೈಲಿನ ಬೋಗಿಯಲ್ಲಿ ಸಿಸಿಟಿವಿ ಕ್ಯಾಮೆರಾ ಕಾಣದಂತೆ ಮುಚ್ಚಿದ ನಗರದ ಪ್ರತಿಷ್ಠಿತ ಶಾಲೆಯ 10 ನೇ ತರಗತಿಯ ಇಬ್ಬರು ವಿದ್ಯಾರ್ಥಿಗಳ ವಿರುದ್ಧ ಮೆಟ್ರೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ನಮ್ಮ ಮೆಟ್ರೊ ರೈಲುಗಳಲ್ಲಿ ಇಂತಹ ಪ್ರಕರಣ ವರದಿಯಾಗುತ್ತಿರುವುದು ಇದೇ ಮೊದಲು ಎಂದು ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ (BMRCL) ಮೂಲಗಳು ತಿಳಿಸಿವ