ದೇಶತಮಿಳುನಾಡು: ಎಸ್ಸಿ ಯುವಕರ ಮೇಲೆ ಹಲ್ಲೆ, ಮೂತ್ರ ವಿಸರ್ಜನೆ ಮಾಡಿದ ಆರು ಮಂದಿ ಬಂಧನ
ಪರಿಶಿಷ್ಟ ಜಾತಿಯ ಇಬ್ಬರು ಯುವಕರ ಮೇಲೆ ಹಲ್ಲೆ, ವಿವಸ್ತ್ರಗೊಳಿಸಿ ಮೂತ್ರ ವಿಸರ್ಜನೆ ಮಾಡಿದ ಆರೋಪದ ಮೇಲೆ ಆರು ಮಂದಿಯನ್ನು ತಿರುನೆಲ್ವೇಲಿ ಬಂಧಿಸಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ. ಬಂಧಿತರೆಲ್ಲರೂ 21 ರಿಂದ 25 ವರ್ಷ ವಯಸ್ಸಿನವರಾಗಿದ್ದು, ಮದ್ಯದ ಅಮಲಿನಲ್ಲಿದ್ದರು ಎಂದು ಹೇಳಲಾಗಿದೆ.