ರಾಜ್ಯಜೋರಾಯ್ತು ನಂದಿನಿ-ಅಮುಲ್ ಜಟಾಪಟಿ: 'ನಂದಿನಿ ಉಳಿಸಿ-ಅಮುಲ್ ತಿರಸ್ಕರಿಸಿ' ಅಭಿಯಾನ ಪ್ರಾರಂಭ
ನಂದಿನಿ ಬ್ರ್ಯಾಂಡ್ ನ್ನು ಹಿಮ್ಮೆಟ್ಟಿ ಗುಜರಾತ್ ಮೂಲದ ಅಮುಲ್ ಬ್ರ್ಯಾಂಡ್ ನ್ನು ಕರ್ನಾಟಕದಲ್ಲಿ ಜನಪ್ರಿಯಗೊಳಿಸಲು ಸರ್ಕಾರ ಪ್ರಯತ್ನ ಮಾಡುತ್ತಿದೆ ಎಂಬ ವಿಷಯ ರಾಜಕೀಯ ತಿರುವು ಪಡೆದುಕೊಂಡು ಜೋರಾಗಿದೆ. ಡೈರಿ ಬ್ರ್ಯಾಂಡ್ ನಂದಿನಿಯನ್ನು ಹೊರಹಾಕಲು ಆಡಳಿತಾರೂಢ ಬಿಜೆಪಿ ಸಂಚು ಹೂಡಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸುತ್ತಿದ್ದಾರೆ.