ರಾಜ್ಯಸರಕಾರ-ಜನರ ನಡುವಣ ಅರ್ಚಕರು ನೀವು; ಆಗುವ ಕೆಲಸಕ್ಕೂ ಸುಮ್ಮನೇ ಕೊಕ್ಕೆ ಹಾಕಬೇಡಿ, ಪದೇಪದೇ ಅಲೆಸಬೇಡಿ: ಡಿ.ಕೆ ಶಿವಕುಮಾರ್
ಕೆಲಸ ಆಗುವಂತಿದ್ದರೂ ಆ ದಾಖಲೆ, ಈ ದಾಖಲೆ ತೆಗೆದುಕೊಂಡು ಬಾ ಎಂದು ತಿರುಗಿಸುತ್ತಾರೆ. ಸಾರ್ವಜನಿಕರು ಸಲಾಂ ಹೊಡೆಯಬೇಕು, ಕಡಲೆ ಕಾಯಿ, ಹಣ್ಣು, ಕೋಳಿ ತಂದುಕೊಡಬೇಕು ಎನ್ನುವ ಧೋರಣೆ ಹೊಂದಿರುತ್ತಾರೆ.