Sandur village

ಸಂಡೂರು: ಗದ್ದೆಗಳಿಗೇ ಹೋಗಿ ರೈತರಿಗೆ ಲಸಿಕೆ ಹಾಕಿದ ಆರೋಗ್ಯ ಇಲಾಖೆ ಸಿಬ್ಬಂದಿ!
ಹಳ್ಳಿಗಳಲ್ಲಿ ಅನೇಕರು ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಲೇ ಇವೆ. ಹೀಗಿರುವಾಗ ಗ್ರಾಮದಲ್ಲಿರುವ ಎಲ್ಲರೂ ಲಸಿಕೆ ಹಾಕಿಸಿಕೊಂಡಿದ್ದಾರೆಯೇ ಇಲ್ಲವೇ, ಹಾಕಿಸಿಕೊಳ್ಳದವರಿಗೆ ಹೇಗೆ ಹಾಕುವುದು ಎಂಬ ಬಗ್ಗೆ ಬಳ್ಳಾರಿ ಜಿಲ್ಲಾಡಳಿತ ನವೀನ ಆಲೋಚನೆ ನಡೆಸಿದೆ.

ಬಳ್ಳಾರಿ: ಕೇಂದ್ರದ 'ಪ್ರಬುದ್ಧ ಯೋಜನೆ'ಗೆ ಸಂಡೂರಿನ ಗ್ರಾಮ ಆಯ್ಕೆ!
ಬಳ್ಳಾರಿಯ ಸಂಡೂರು ತಾಲೂಕಿನ ಯಶವಂತನಗರ ಇದೀಗ ದೊಡ್ಡ ಹೆಸರಾಗಿದೆ. ಇದು ಕೇಂದ್ರ ಸರ್ಕಾರದ ಪ್ರಬುದ್ಧ ಗ್ರಾಮ ಯೋಜನೆ ಅಡಿಯಲ್ಲಿ ಅಭಿವೃದ್ಧಿಪಡಿಸಲು ಆಯ್ಕೆಯಾದ ಭಾರತದ ಏಳು ಹಳ್ಳಿಗಳಲ್ಲಿ ಒಂದಾಗಿದೆ, ಇಡೀ ದಕ್ಷಿಣ ಭಾರತದಲ್ಲಿ ಈ ಯೋಜನೆಗೆ ಆಯ್ಕೆಯಾಗಿರುವ ಏಕೈಕ ಗ್ರಾಮವಾಗಿದೆ.

