Sandalwood drugs mafia

ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣ: ಕೋರ್ಟ್ ಆದೇಶ ಕೇಳಿ ಕಣ್ಣೀರಿಟ್ಟ ನಟಿ ರಾಗಿಣಿ, ಸಂಜನಾ!
ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ಜಾಲ ಆರೋಪಕ್ಕೆ ಸಂಬಂಧಿಸಿ ನಟಿ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿ ಅವರನ್ನು ನ್ಯಾಯಾಲಯದ ಮತ್ತೆ 3 ದಿನಗಳ ಕಾಲ ಸಿಸಿಬಿ ಕಸ್ಟಡಿಗೆ ಒಪ್ಪಿಸಿದೆ.

ಕನ್ನಡ ಸ್ವಲ್ಪ ಗೊತ್ತಿದೆ ಎಂದು ಉತ್ತರದಿಂದ ಬಂದವರಿಂದ ಚಿತ್ರರಂಗದ ಮಾನ ಹರಾಜು : ಜಗ್ಗೇಶ್
ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ನಂಟು ದಿನದಿನಕ್ಕೆ ಹೊಸ ಟ್ವಿಸ್ಟ್ ಪಡೆದುಕೊಳ್ಳುತ್ತಿದ್ದು ಈ ಬಗ್ಗೆ ನವರಸನಾಯಕ ಜಗ್ಗೇಶ್ ಟ್ವೀಟ್ ಮೂಲಕ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. "ಕನ್ನಡ ಸ್ವಲ್ಪ ಗೊತ್ತಿದೆ ಎಂದು ಉತ್ತರದಿಂದ ಬಂದವರಿಂದ ಚಿತ್ರರಂಗದ ಮಾನ ಹರಾಜಾಗುತ್ತಿದೆ" ಎಂದು ಜಗ್ಗೇಶ್ ಹೇಳಿದ್ದಾರೆ.

ಗಾಂಜಾವನ್ನು ತುಳಸಿ ಗಿಡಕ್ಕೆ ಹೋಲಿಸಿದ್ದ ನಟಿ ನಿವೇದಿತಾ ವಿರುದ್ಧ ಎಫ್ಐಆರ್
ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ವಿಚಾರ ದಿನಕ್ಕೊಂದು ಹೊಸ ತಿರುವು ಪಡೆದುಕೊಳ್ಳುತ್ತಿರುವ ಬೆನ್ನಲ್ಲೇ ನಟಿ ನಿವೇದಿತಾ ವಿರುದ್ಧ ಎಫ್ಐಆರ್ ದಾಖಲಾಗಿದೆ.. ಗಾಂಜಾ ಎನ್ನುವುದು ತುಳಸಿಯಷ್ಟೇ ಪವಿತ್ರ ಎಂದು ಮಾದ್ಯಮಗಳೆದುರು ಹೇಳಿಕೆ ನೀಡಿದ್ದ ನಟಿಯ ವಿರುದ್ಧ ಮಲ್ಲೇಶ್ವರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗಾಂಜಾ ಎನ್ನೋದು ಡ್ರಗ್ಸ್ ಅಲ್ಲ ಮೆಡಿಸಿನ್, ನಾನೂ ತೆಗೆದುಕೊಳ್ಳುತ್ತೇನೆ: ಯುವನಟ ರಾಕೇಶ್ ಅಡಿಗ
ಗಾಂಜಾ ಒಂದು ಡ್ರಗ್ಸ್ ಅಲ್ಲ ಅದೊಂದು ಔಷಧ(ಮೆಡಿಸಿನ್) ಆಗಿದೆ. ನಾನೂ ಅದನ್ನು ತೆಗೆದುಕೊಳ್ಳುತ್ತೇನೆ ಎಂದು ಕನ್ನಡ ಚಿತ್ರರಂಗದ ಯುವನಟ ರಾಕೇಶ್ ಅಡಿಗ ಹೇಳಿದ್ದಾರೆ.

