ದೇಶಅಯೋಧ್ಯೆ ರಾಮ ಮಂದಿರ: ಗರ್ಭಗುಡಿಯೊಳಗೆ ರಾಮಲಲ್ಲಾ ವಿಗ್ರಹ ಪ್ರತಿಷ್ಠಾಪನೆ; ಫೋಟೋ ವೈರಲ್
ಅಯೋಧ್ಯೆ ರಾಮ ಮಂದಿರದ ಗರ್ಭಗೃಹದಲ್ಲಿ ಇರಿಸಲಾದ ರಾಮ್ ಲಲ್ಲಾನ ವಿಗ್ರಹದ ಮೊದಲ ಚಿತ್ರಗಳು ಹೊರಬಂದಿವೆ. 51 ಇಂಚಿನ ರಾಮ್ ಲಲ್ಲಾ ವಿಗ್ರಹವನ್ನು ಬಿಳಿ ಬಟ್ಟೆಯಲ್ಲಿ ಸುತ್ತಿ ನಿಲ್ಲಿಸಿರುವ ಭಂಗಿಯಲ್ಲಿ ಕಾಣಬಹುದು. ರಾಮ್ ಲಲ್ಲಾ ವಿಗ್ರಹವು 150 ಕೆಜಿಗಿಂತ ಹೆಚ್ಚು ತೂಕವಿದ್ದು, ಇದನ್ನು ಮೈಸೂರಿನ ಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿದ್ದಾರೆ.