ಕ್ರಿಕೆಟ್ಚೆಂಡಿಗೆ ಎಂಜಲು ಸವರುವುದನ್ನು ನಿಲ್ಲಿಸಲು ಬೌಲರ್ ಗಳು ಮಾಸ್ಕ್ ಧರಿಸುವಂತಾಗಲಿ: ಮಿಸ್ಬಾ ಉಲ್-ಹಕ್
ಚೆಂಡಿನ ಹೊಳಪಿಗಾಗಿ ಎಂಜಲು ಬಳಕೆ ನಿಲ್ಲಿಸಲು ಶಿಫಾರಸು ಬಂದಿದ್ದು, ಈ ಬಗ್ಗೆ ಚರ್ಚೆ ನಡೆಯುತ್ತಿದೆ. ಪಾಕಿಸ್ತಾನದ ಮುಖ್ಯ ತರಬೇತುದಾರ ಮಿಸ್ಬಾ ಉಲ್-ಹಕ್ ಈ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು, ಕೋವಿಡ್-19 ಪರಿಸ್ಥಿತಿಯ ನಂತರ ಬೌಲರ್ ಗಳಿಗೆ ಎಂಜಲು ಬಳಕೆ ನಿಲ್ಲಿಸುವುದು ಕಷ್ಟ ಸಾಧ್ಯ ಎಂದು ಹೇಳಿದ್ದಾರೆ.