ರಾಜ್ಯವೈದ್ಯರ ಕಂಡರೆ ಹೊಡೆಯುವ ಜನಗಳ ನಡುವೆ ಜೀವ ಉಳಿಸಿದ ಆರೋಗ್ಯ ಕಾರ್ಯಕರ್ತರ ಕುರಿತು 'ಸಲೀಂ' ಹೇಳಿದ ಮಾತು ಕೇಳಿ!
ಕೊರೋನಾ ವೈರಸ್ ಸೋಂಕಿತರ ಸಂಪರ್ಕಕ್ಕೆ ಬಂದಿದ್ದವರನ್ನು ಕ್ವಾರಂಟೈನ್ ಮಾಡಲು ಬಂದಿದ್ದ ವೈದ್ಯರಿಗೆ ಥಳಿಸಿ ಅಟ್ಟಾಡಿಸಿದ್ದ ಪಾದರಾಯನಪುರದ ಅವಿವೇಕಿಗಳ ಸುದ್ದಿ ಹಸಿರಾಗಿರುವಂತೆಯೇ ಇತ್ತ ಮಂಗಳೂರಿನಲ್ಲಿ ಕೊರೋನಾ ವೈರಸ್ ನಿಂದ ಗುಣಮುಖರಾದ ವ್ಯಕ್ತಿಯೊಬ್ಬರು ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿಗಳ ಕುರಿತು ಆಡಿರುವ ಮಾತುಗಳು ಜನ ಸಾಮಾನ್ಯರ ಹೃದಯ ಗೆದ್ದಿದೆ.