ರಾಜ್ಯಭಾರತದ ಇತಿಹಾಸದಲ್ಲಿಯೇ ಅತ್ಯಂತ ದೀರ್ಘಕಾಲ ಜೈಲು ವಾಸ: ಪರಪ್ಪನ ಅಗ್ರಹಾರದಿಂದ ಕಲಬುರಗಿಯ ಸಾಯಿಬಣ್ಣ ಬಿಡುಗಡೆ!
ಸನ್ನಡತೆಯ ಆಧಾರದ ಮೇಲೆ ಶನಿವಾರ ಜೈಲಿನಿಂದ ಬಿಡುಗಡೆಯಾದ 24 ಜೀವಾವಧಿ ಶಿಕ್ಷೆಯ ಕೈದಿಗಳಲ್ಲಿ ಸಾಯಿಬಣ್ಣ ಕೂಡ ಒಬ್ಬರು. ಆದರೆ, ಅವರ ಈ ಬಿಡುಗಡೆ ದೇಶದ ಅತ್ಯಂತ ದೀರ್ಘಾವಧಿಯ ಜೈಲು ಶಿಕ್ಷೆಯ ಇತಿಹಾಸ ಮತ್ತು ಅಪರಾಧ ಜಗತ್ತಿನ ವಿಚಿತ್ರ ಮನಸ್ಥಿತಿಯೊಂದನ್ನು ಸಮಾಜದ ಮುಂದೆ ತೆರೆದಿಟ್ಟಿದೆ.