ಸಿನಿಮಾ ಸುದ್ದಿಇಂದ್ರಜಿತ್ ಲಂಕೇಶ್ ಪುತ್ರ ಸಮರ್ಜಿತ್ ಜೊತೆಗೆ ಸ್ಯಾಂಡಲ್ವುಡ್ಗೆ ಸಾನ್ಯಾ ಅಯ್ಯರ್ ಪದಾರ್ಪಣೆ
ಕನ್ನಡ ಚಿತ್ರರಂಗಕ್ಕೆ ಕೊಡುಗೆ ನೀಡಿರುವ ಪಿ ಲಂಕೇಶ್ ಕುಟುಂಬದ ಕುಡಿ ಇದೀಗ ಬೆಳ್ಳಿತೆರೆ ಮೇಲೆ ವಿಜೃಂಭಿಸಲು ಸಿದ್ಧರಾಗಿದ್ದಾರೆ. ತಂದೆ ಇಂದ್ರಜಿತ್ ಲಂಕೇಶ್ ನಿರ್ದೇಶನದ ಚಿತ್ರದಲ್ಲಿ ಪುತ್ರ ಸಮರ್ಜಿತ್ ಲಂಕೇಶ್ ನಟಿಸುತ್ತಿದ್ದು, ಇವರೊಂದಿಗೆ ನಟಿ ಸಾನ್ಯಾ ಅಯ್ಯರ್ ಕೂಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ.