ರಾಜ್ಯಬೆಳಗಾವಿಯಲ್ಲಿ ಎಲೆಕ್ಟ್ರಿಕ್ ವಾಹನ ಪ್ಲಾಂಟ್ ನಿರ್ಮಿಸಲು ರಷ್ಯಾದ ಕಂಪನಿ ಆಸಕ್ತಿ: ಮುರುಗೇಶ್ ನಿರಾಣಿ
ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನ ಘಟಕವನ್ನು ಸ್ಥಾಪಿಸಲು ರಷ್ಯಾದ ಕಂಪನಿಯೊಂದು ಆಸಕ್ತಿ ತೋರಿದ್ದು, ಬೆಳಗಾವಿಯಲ್ಲಿ ಸ್ಥಾಪಿಸುವಂತೆ ಸರ್ಕಾರ ಕೇಳಿಕೊಂಡಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಮುರುಗೇಶ್ ನಿರಾಣಿ ಶುಕ್ರವಾರ ವಿಧಾನಸಭೆಗೆ ತಿಳಿಸಿದರು.