ರಾಜ್ಯಸಕಾಲ ಮಾದರಿಯಲ್ಲೇ ಆರ್.ಟಿ.ಐ. ಸೇವೆಗಳೂ ಆನ್-ಲೈನ್ ನಲ್ಲಿ ಲಭ್ಯ: ಸಚಿವ ಸುರೇಶ್ ಕುಮಾರ್
ನಾಗರೀಕರಿಗೆ ನಿಗದಿತ ಅವಧಿಯಲ್ಲಿ ಸೇವೆ ದೊರೆಯುವಂತೆ ಮಾಡಲು 'ಸಕಾಲ'ಸೇವೆಗಳನ್ನು ಆನ್ ಲೈನ್ ಗೊಳಿಸಿದ ಮಾದರಿಯಲ್ಲೇ ಮಾಹಿತಿ ಹಕ್ಕು ಅಧಿನಿಯಮ-ಆರ್.ಟಿ.ಐ. ಸೇವೆಗಳನ್ನೂ ಸಹ ಆನ್-ಲೈನ್ ವ್ಯವಸ್ಥೆಗೆ ತರುವುದಾಗಿ ಪ್ರಾಥಮಿಕ, ಪ್ರೌಢಶಿಕ್ಷಣ, ಕಾರ್ಮಿಕ ಮತ್ತು ಸಕಾಲ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.