RT-PCR

90 ನಿಮಿಷಗಳಲ್ಲಿ ಓಮಿಕ್ರಾನ್ ಪತ್ತೆ ಹಚ್ಚುವ ವಿಧಾನ: ದೆಹಲಿ ಐಐಟಿ ಸಂಶೋಧಕರ ಸಾಧನೆ
ಸದ್ಯ ಜಗತ್ತಿನಾದ್ಯಂತ ಚಾಲ್ತಿಯಲ್ಲಿರುವ ವಿಧಾನವು ಓಮಿಕ್ರಾನ್ ಪತ್ತೆಗೆ 3 ದಿನಗಳನ್ನು ತೆಗೆದುಕೊಳ್ಳುತ್ತದೆ. ಅಂಥದ್ದರಲ್ಲಿ ಮೂರು ದಿನಗಳನ್ನು ಕೇವಲ 90 ನಿಮಿಷಗಳಿಗೆ ಇಳಿಸಿದ ಖ್ಯಾತಿ ಭಾರತೀಯ ಸಂಶೋಧಕರದ್ದು.

ಕೋವಿಡ್ ನಿರ್ಬಂಧ ಮತ್ತಷ್ಟು ಸಡಿಲಿಸಿದ ಭಾರತ: ಈ 11 ದೇಶಗಳಿಂದ ಬರುವವರಿಗೆ ಕೋವಿಡ್ ಪರೀಕ್ಷೆ ಬೇಕಿಲ್ಲ!!
ಭಾರತವೂ ಸೇರಿದಂತೆ ಜಗತ್ತಿನಾದ್ಯಂತ ಕೋವಿಡ್ ಮಹಾಮಾರಿಯ ಅಬ್ಬರ ತಗ್ಗಿರುವ ಹಿನ್ನಲೆಯಲ್ಲಿ ಮತ್ತು ಕೋವಿಡ್ ಲಸಿಕೆ ವಿತರಣೆ ಗಮನಾರ್ಹ ಹಂತ ತಲುಪಿರುವ ಹಿನ್ನಲೆಯಲ್ಲಿ ಭಾರತ ಸರ್ಕಾರ ತನ್ನ ಕೋವಿಡ್ ನಿರ್ಬಂಧಗಳನ್ನು ಮತ್ತಷ್ಟು ಸಡಿಲಿಸಿದೆ.

ಕೋವಿಡ್-19 ಹರಡದೇ ಇರುವವರೂ ಏಕೆ ಆರ್ ಟಿ-ಪಿಸಿಆರ್ ಪರೀಕ್ಷೆಗೊಳಪಡಬೇಕು?: ಕೇಂದ್ರ, ಕೇರಳಕ್ಕೆ ಹೈಕೋರ್ಟ್ ಪ್ರಶ್ನೆ
ವ್ಯಕ್ತಿಯೋರ್ವ ತಾನು ಕೋವಿಡ್-19 ಹರಡುವ ಅಪಾಯವನ್ನೊಡ್ಡುತ್ತಿಲ್ಲ ಎಂದರೂ ಆ ವ್ಯಕ್ತಿ ಪ್ರತಿ ಬಾರಿ ಹೊರಹೋಗುವುದಕ್ಕೂ 72 ಗಂಟೆಗಳ ಮುನ್ನ ಕಡ್ಡಾಯವಾಗಿ ಏಕೆ ಆರ್ ಟಿ-ಪಿಸಿಆರ್ ಪರೀಕ್ಷೆಗೆ ಒಳಪಡಬೇಕೆಂದು ಕೇಂದ್ರ ಸರ್ಕಾರ, ಕೇರಳ ಸರ್ಕಾರವನ್ನು ಅಲ್ಲಿನ ಹೈಕೋರ್ಟ್ ಪ್ರಶ್ನಿಸಿದೆ.

ಕೋವಿಡ್ ಆತಂಕ: ಲಸಿಕೆ ಪ್ರಮಾಣಪತ್ರ ಬದಲು ಆರ್'ಟಿ-ಪಿಸಿಆರ್ ಪರೀಕ್ಷೆ ಕಡ್ಡಾಯಗೊಳಿಸಿದ ಸರ್ಕಾರ, ಕರ್ನಾಟಕ-ಕೇರಳ ಗಡಿಯಲ್ಲಿ ಗೊಂದಲ ಸೃಷ್ಟಿ
ಕೊರೋನಾ ಸೋಂಕು ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಆದೇಶದಂತೆ ಕೊರೋನಾ ನೆಗೆಟಿವ್ ವರದಿ ರಹಿತರಿಗೆ ಕರ್ನಾಟಕ ಗಡಿ ಪ್ರವೇಶಕ್ಕೆ ಸೋಮವಾರ ಸಂಪೂರ್ಣ ನಿರ್ಬಂಧ ಹೇರಲಾಗಿದ್ದು, ಈ ನಿರ್ಧಾರಕ್ಕೆ ಗಡಿ ಪ್ರದೇಶದಲ್ಲಿ ಹಲವರು ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ ಘಟನೆ ನಡೆಯಿತು.

ಕೋವಿಡ್ ನೆಗೆಟಿವ್ ಪ್ರಮಾಣಪತ್ರ ತರದ ಬೆಂಗಳೂರಿನ ಪ್ರಯಾಣಿಕರನ್ನು ವಾಪಸ್ ಕಳಿಸಿದ ರಾಯ್ಪುರ ವಿಮಾನ ನಿಲ್ದಾಣ ಸಿಬ್ಬಂದಿ
ಮೂವರು ಬೆಂಗಳೂರಿನವರೂ ಸೇರಿದಂತೆ 13 ಪ್ರಯಾಣಿಕರ ಗುಂಪನ್ನು ಛತ್ತೀಸ್ ಘರ್ ರಾಯ್ಪುರ್ ವಿಮಾನ ನಿಲ್ದಾಣದಿಂದ ಮತ್ತೆ ಅವರು ರಾಯ್ಪುರಕ್ಕೆ ಆಗಮಿಸಲು ವಿಮಾನವೇರಿದ್ದ ಅದೇ ವಿಮಾನ ನಿಲ್ದಾಣಗಳಿಗೆ ಹಿಂದಿರುಗುವಂತೆ ಸೂಚಿಸಲಾಗಿದೆ.

24 ಗಂಟೆಗಳಲ್ಲಿ ಕೋವಿಡ್ ಆರ್ಟಿ-ಪಿಸಿಆರ್ ವರದಿ ಒದಗಿಸಿ; ಲ್ಯಾಬ್ ಗಳಿಗೆ ರಾಜ್ಯ ಸರ್ಕಾರ ಸೂಚನೆ
ಸ್ಯಾಂಪಲ್ ಸಂಗ್ರಹಿಸಿದ 24 ಗಂಟೆಗಳಲ್ಲಿ ಕೋವಿಡ್ ಆರ್ಟಿ-ಪಿಸಿಆರ್ ವರದಿ ನೀಡಬೇಕೆಂದು ರಾಜ್ಯದ ಎಳ್ಲಾ ಲ್ಯಾಬ್ ಗಳು ಹಾಗೂ ಪರೀಕ್ಷಾ ಸಂಸ್ಥೆಗಳಿಗೆ ರಾಜ್ಯ ಸರ್ಕಾರ ಬುಧವಾರ ಸೂಚನೆ ನೀಡಿದೆ.

