RR Nagar By Polls

ಉಪಚುನಾವಣೆ ಫಲಿತಾಂಶದಿಂದ ಪಾಠ ಕಲಿಯದಿದ್ದರೆ ಕಾಂಗ್ರೆಸ್ ಪಕ್ಷವನ್ನೆ ಜನರು ಅರಬ್ಬೀ ಸಮುದ್ರಕ್ಕೆ ಬಿಸಾಡುತ್ತಾರೆ: ಕಟೀಲ್
ಜನತಾ ಜನಾರ್ದನನ ಎದುರು ಕನಕಪುರ ಬಂಡೆ ಪುಡಿಯಾಗಿದೆ. ಹುಲಿಯಾ ಗೂಡು ಸೇರಿದ್ದಾರೆ. ಇನ್ನೂ ಎರಡುವರೆ ವರ್ಷಗಳ ಕಾಲ ಯಡಿಯೂರಪ್ಪ ಅವರ ಆಡಳಿತದಲ್ಲಿ ನೆಮ್ಮದಿಯಿಂದ ಇರಿ ಎಂದು ಜನರು ಬಿಜೆಪಿಗೆ ಆಶೀರ್ವದಿಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

ಮುನಿರತ್ನರಿಂದ ಶಕುನಿ ಪಾತ್ರ: ಹಣ ಹಂಚಿಕೆ ವಿಡಿಯೋ ಬಿಡುಗಡೆ ಮಾಡಿದ ಸಂಸದ ಡಿಕೆ ಸುರೇಶ್
ಆರ್ ಆರ್ ನಗರದಲ್ಲಿ ಒಳ್ಳೆಯ ನಿರ್ಮಾಪಕರು ಸ್ಪರ್ಧಿಸಿದ್ದು, ಆಗಾಗ ಡೈರೆಕ್ಟಿಂಗ್ ಆ್ಯಕ್ಟಿಂಗ್ ನಡೆಯುತ್ತಿದೆ. ಹಿಂದೆ ದುಶ್ಯಾಸನನ ಪಾತ್ರ ಮಾಡುತ್ತಿದ್ದರು. ಈಗ ಶಕುನಿ ಪಾತ್ರ ಮಾಡುತ್ತಾ ಇದ್ದಾರೆ. ಚಿತ್ರಕಥೆಯೂ ಮುನಿರತ್ನದ್ದೆ. ಸ್ಪರ್ಧೆ ಚಿತ್ರವನ್ನು ಚೆನ್ನಾಗಿ ಬಿಡುಗಡೆ ಮಾಡುತ್ತಿದ್ದಾರೆ ಎಂದು ಸಂಸದ ಡಿಕೆ ಸುರೇಶ್ ವ್ಯಂಗ್ಯವಾಡಿದ್ದಾರೆ.

ಆರ್ ಆರ್ ನಗರ ಉಪಚುನಾವಣೆ: ಪ್ರಚಾರದ ವೇಳೆ ಡಿಕೆ ಶಿವಕುಮಾರ್‌ರಿಂದ 'ಜೈ ಶ್ರೀರಾಮ್' ಘೋಷಣೆ!
ಆರ್ ಆರ್ ನಗರ ಉಪಚುನಾವಣೆ ಪ್ರಚಾರದ ವೇಳೆ ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿಕೆ ಶಿವಕುಮಾರ್ ಅವರು ಹಿಂದುತ್ವ ಜಪ ಮಾಡಿದ್ದಾರೆ.

ರಾಷ್ಟ್ರೀಯ ಪಕ್ಷಗಳ ವ್ಯಾಮೋಹದಿಂದ ಜನರು ಹೊರಬರಬೇಕು: ಎಚ್ ಡಿ ಕುಮಾರಸ್ವಾಮಿ
ಪ್ರಾಮಾಣಿಕ ರಾಜಕಾರಣಿ ಸೃಷ್ಟಿ ಜನರ ಕೈಯಲ್ಲಿದೆ. ರಾಷ್ಟ್ರೀಯ ಪಕ್ಷಗಳ ವ್ಯಾಮೋಹದಿಂದ ಜನರು ಆದಷ್ಟುಬೇಗ ಹೊರಬರಬೇಕು ಎಂದು ಮಾಜಿ ಮುಖ್ಯಮಂತ್ರಿ ಜೆಡಿಎಸ್ ಶಾಸಕಾಂಗ ನಾಯಕ ಹೆಚ್.ಡಿ.ಕುಮಾರಸ್ವಾಮಿ ಕರೆ ನೀಡಿದ್ದಾರೆ.

ಆರ್ ಆರ್ ನಗರ ಚುನಾವಣೆ ರಾಜಕಾರಣದ ಧರ್ಮ-ಅಧರ್ಮದ ನಡುವಣ ಯುದ್ಧ: ಡಿಕೆಶಿ
ಆರ್ ಆರ್ ನಗರ ಕ್ಷೇತ್ರದ ಚುನಾವಣೆ ಕೇವಲ ಚುನಾವಣೆ ಮಾತ್ರವಲ್ಲ ಇದು ಧರ್ಮ ಯುದ್ಧ. ಮತದಾರ ಈ ಕ್ಷೇತ್ರವನ್ನು ನೀಚ ರಾಜಕಾರಣಿಯ ನಿಯಂತ್ರಣದಿಂದ ಮುಕ್ತಗೊಳಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

ಜೆಡಿಎಸ್ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂದವರೇ, ನೀವೇ ಸಿಎಂ ಅಂತಾ ಮನೆ ಬಾಗಿಲಿಗೆ ಬಂದಿದ್ದರು: ಕುಮಾರಸ್ವಾಮಿ
ಈ ಹಿಂದೆ ಅವರಪ್ಪನಾಣೆ ನಾನು ಮುಖ್ಯಮಂತ್ರಿ ಆಗಲ್ಲ ಅಂತಾ ಹೇಳಿದ್ದರು. ಆದರೆ, ಅವರೇ 2018ರಲ್ಲಿ ನಮ್ಮ ಮನೆ ಬಾಗಿಲಿಗೆ ಬಂದು ನೀವೇ ಮುಖ್ಯಮಂತ್ರಿಯಾಗಿ ಎಂದು ದುಂಬಾಲು ಬಿದ್ದಿದ್ದನ್ನು ಇಡೀ ರಾಜ್ಯ ನೋಡಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ತಿರುಗೇಟು ನೀಡಿದರು.

ಡಿಕೆ ಶಿವಕುಮಾರ್ ಎಂದರೆ ಹಾಳೂರಿನಲ್ಲುಳಿದ ಗೌಡನಂತೆ: ಸಿ.ಟಿ ರವಿ ಲೇವಡಿ
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಳೂರಿನಲ್ಲಿ ಉಳಿದ ಏಕೈಕ ಗೌಡನಿದ್ದಂತೆ ಎಂದು ದಕ್ಷಿಣ ಭಾರತ ಬಿಜೆಪಿ ಉಸ್ತುವಾರಿ ಸಿಟಿ ರವಿ ಲೇವಡಿ ಮಾಡಿದ್ದಾರೆ.

ಕೇಂದ್ರ, ರಾಜ್ಯ ಸರ್ಕಾರಕ್ಕೆ ಉಪ ಚುನಾವಣೆ ಫಲಿತಾಂಶದ ಮೂಲಕ ಎಚ್ಚರಿಕೆಯ ಸಂದೇಶ ರವಾನೆ: ಡಿಕೆ ಶಿವಕುಮಾರ್
ಶಿರಾ ಹಾಗೂ ಆರ್.ಆರ್ ನಗರ ಉಪಚುನಾವಣೆಯನ್ನು ಯಡಿಯೂರಪ್ಪ ಸರ್ಕಾರವನ್ನಾಗಲೀ ಅಥವಾ ಮೋದಿ ಸರ್ಕಾರವನ್ನಾಗಲೀ ಅಸ್ಥಿರಗೊಳಿಸಲು ಕಾಂಗ್ರೆಸ್ ಎದುರಿಸುತ್ತಿಲ್ಲ. ಈ ಉಪಚುನಾವಣೆಯನ್ನು ಎರಡೂ ಸರ್ಕಾರಗಳಿಗೆ ಸಂದೇಶವೊಂದನ್ನು ರವಾನಿಸಲು ಎದುರಿಸಲಾಗುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.

ಡಿಕೆಶಿ ಒಕ್ಕಲಿಗ ಜಾತಿಯನ್ನು ಗುತ್ತಿಗೆ ತೆಗೆದುಕೊಂಡಿದ್ದಾರೆಯೇ?: ಹೆಚ್‌ಡಿಕೆ ಗರಂ
ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಒಕ್ಕಲಿಗ ಜಾತಿಯನ್ನು ಗುತ್ತಿಗೆ ತೆಗೆದುಕೊಂಡಿದ್ದಾರೆಯೇ?. ಇವರೇನು ಜಾತಿ ರಕ್ಷಕರೇ? ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.

