ದೇಶಕೊಲಿಜಿಯಂ ಶಿಫಾರಸ್ಸಿಗೆ ಕೇಂದ್ರದ ಅಡ್ಡಿ, ಪ್ರಜಾಪ್ರಭುತ್ವಕ್ಕೆ ಮಾರಕ: ಸುಪ್ರೀಂ ಮಾಜಿ ನ್ಯಾಯಮೂರ್ತಿ ನಾರಿಮನ್!
ನ್ಯಾಯಮೂರ್ತಿಗಳ ನೇಮಕದ ಕೊಲಿಜಿಯಂ ವ್ಯವಸ್ಥೆಯ ವಿರುದ್ಧ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಅವರು ಇತ್ತೀಚೆಗೆ ಮಾಡಿದ ಹೇಳಿಕೆಯನ್ನು ಟೀಕಿಸಿರುವ ಸುಪ್ರೀಂ ಕೋರ್ಟ್ ಮಾಜಿ ನ್ಯಾಯಮೂರ್ತಿ ರೋಹಿಂಟನ್ ಫಾಲಿ ನಾರಿಮನ್ ಅವರು ಸ್ವತಂತ್ರ ನ್ಯಾಯಾಂಗ ಪ್ರಜಾಪ್ರಭುತ್ವದ ಕೊನೆಯ ಸ್ತಂಭವಾಗಿದ್ದರೆ, ಅದು ಕುಸಿದರೆ ದೇಶವು ನಾಶವಾಗುತ್ತದೆ ಎಂದು ಹೇಳಿದ್ದಾರೆ.