ರಾಜ್ಯಬಿಟಿಆರ್: ಕ್ಯಾಮರಾ ಟ್ರ್ಯಾಪ್ ನೊಂದಿಗೆ ಹುಲಿಗಳ ಚಲನವಲನದ ಮೇಲೆ ಗ್ರಾಮಸ್ಥರಿಗೆ ಮಾಹಿತಿ!
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ (ಬಿಟಿಆರ್) ಕುಂದಕೆರೆ ವ್ಯಾಪ್ತಿಯಲ್ಲಿ ಮಂಗಳವಾರ ಬೆಳಗ್ಗೆ ಹುಲಿಯೊಂದು ಅರ್ಧ ತಿಂದು ಹಾಕಿದ್ದ 54 ವರ್ಷದ ಕುರಿಗಾಯಿ ಪತ್ತೆಯಾದ ನಂತರ ಅರಣ್ಯ ಇಲಾಖೆ ಮೀಸಲು ಪ್ರದೇಶದ ಒಳಗೆ ಅಥವಾ ಸುತ್ತಮುತ್ತ ವಾಸಿಸುವ ಜನರು ತಮ್ಮ ಪ್ರದೇಶಗಳಲ್ಲಿ ಓಡಾಡುವ ಹುಲಿಗಳ ಚಲನವಲನಗಳ ಬಗ್ಗೆ ಎಚ್ಚರಿಕೆ ನೀಡಲು ತಂತ್ರಜ್ಞಾನದ ಮೊರೆ ಹೋಗಿದೆ.