ರಾಜ್ಯಚಿಕ್ಕಮಗಳೂರು: ಹಾಸನದಿಂದ ಕೆಲಸ ಅರಸಿ ಬಂದು ರಸ್ತೆಬದಿಯಲ್ಲಿ ಆಶ್ರಯ ಪಡೆದ ದಂಪತಿ ಮೇಲೆ ಕಾಡಾನೆ ದಾಳಿ
ಚಿಕ್ಕಮಗಳೂರು ಜಿಲ್ಲೆಯ ಬಣಕಲ್ ಗ್ರಾಮದ ಪಶುವೈದ್ಯಕೀಯ ಆಸ್ಪತ್ರೆಯ ಬಳಿ ರಸ್ತೆ ಬದಿ ಮಲಗಿದ್ದ ದಂಪತಿ ಮೇಲೆ ಕಾಡಾನೆ ದಾಳಿ ನಡೆಸಿದೆ. ಭಾನುವಾರ ತಡರಾತ್ರಿ ಈ ಘಟನೆ ನಡೆದಿದ್ದು, ಸೋಮವಾರ ಬೆಳಗ್ಗೆ ದಂಪತಿಯನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.