ರಾಜ್ಯರಾಮನಗರ: ಎರಡು ಬಾರಿ ಕೈಕೊಟ್ಟ ಲಕ್; 45 ನಿಮಿಷದ ಅಂತರದಲ್ಲಿ 2 ಸಲ ದರೋಡೆಗೊಳಗಾದ ವೃದ್ಧೆ!
ಪುಟ್ಟಮ್ಮ ಎಂಬುವರು 1.5 ಲಕ್ಷ ರು. ಮೌಲ್ಯದ ತಮ್ಮ 30 ಗ್ರಾಂ ಚಿನ್ನದ ಸರ ಕಳೆದುಕೊಂಡಿದ್ದಾರೆ. ಪುಟ್ಟಮ್ಮ ಸಾತನೂರು ರಸ್ತೆಯ ಕನಕನಗರ ನಿವಾಸಿ. ಶನಿವಾರ ಸಂಜೆ 4.30ರಿಂದ 5.15ರ ನಡುವೆ ಅಪ್ಪಗೆರೆಯ ದೇವಸ್ಥಾನವೊಂದಕ್ಕೆ ಒಂಟಿಯಾಗಿ ತೆರಳುತ್ತಿದ್ದ ವೇಳೆ ಆಕೆಯ ಮೇಲೆ ದಾಳಿ ನಡೆದಿದೆ.