Rewind 2022

ಹಿನ್ನೋಟ 2022: ಹಲವು ಐತಿಹಾಸಿಕ ಕ್ಷಣಗಳು, ತೀರ್ಪುಗಳಿಗೆ ಸಾಕ್ಷಿಯಾದ ಸುಪ್ರೀಂ ಕೋರ್ಟ್
ತನ್ನ 72 ವರ್ಷಗಳ ಸುದೀರ್ಘ ಇತಿಹಾಸದಲ್ಲಿ 2022 ರಲ್ಲಿ ಸುಪ್ರೀಂ ಕೋರ್ಟ್ ಅನೇಕ "ಮೊದಲ" ಮತ್ತು "ಐತಿಹಾಸಿಕ, ಅಭೂತಪೂರ್ವ ನಡೆಗಳಿಗೆ" ಸಾಕ್ಷಿಯಾಗಿದೆ. ಸುಪ್ರೀಂ ಕೋರ್ಟ್ ನಲ್ಲಿ ಈ ವರ್ಷ ಮೂವರು ಮುಖ್ಯ ನ್ಯಾಯಾಧೀಶರನ್ನು ಕಾಣಬೇಕಾಯಿತು.

ಸ್ಯಾಂಡಲ್ ವುಡ್ ಹಿನ್ನೋಟ 2022: ಅಪ್ಪಟ ಕನ್ನಡದ ಪ್ರತಿಭೆಗಳು ಇವರು
ದಕ್ಷಿಣ ಭಾರತದ ಚಿತ್ರರಂಗದಿಂದ ಒಂದು ಉದ್ಯಮವಾಗಿ ಹೊರಗುಳಿದ ವರ್ಷಗಳ ನಂತರ, ಕಳೆದ ಕೆಲವು ವರ್ಷಗಳಲ್ಲಿ, ವಿಶೇಷವಾಗಿ ಕೆಜಿಎಫ್ ಚಿತ್ರದ ಅದ್ಬುತ ಯಶಸ್ಸಿನ ನಂತರ, ಕನ್ನಡ ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ಅನೇಕ ಸಕಾರಾತ್ಮಕ ಬೆಳವಣಿಗೆಗಳ ಕೇಂದ್ರವಾಗಿದೆ.

ಕನ್ನಡ ಸಿನೆಮಾಗಳ ಮಾಂತ್ರಿಕ ವರ್ಷ 2022: ರಾಷ್ಟ್ರಮಟ್ಟದಲ್ಲಿ ಶ್ರೀಗಂಧದ ಕಂಪನ್ನು ಪರಸರಿಸಿದ 'ಸ್ಯಾಂಡಲ್ ವುಡ್'
2022 ಕಳೆದ 2023ಕ್ಕೆ ನಾಳೆ ಕಾಲಿಡುತ್ತಿದ್ದೇವೆ. ಈ ಸಂದರ್ಭದಲ್ಲಿ ಕಳೆದ ವರ್ಷದ ಘಟನಾವಳಿಗಳನ್ನು ನೆನಪು ಮಾಡಿಕೊಳ್ಳುವುದು ಸಹಜ, 2022 ಖಂಡಿತವಾಗಿ ಕನ್ನಡ ಚಿತ್ರರಂಗಕ್ಕೆ ಮಾಂತ್ರಿಕ ವರ್ಷ ಎಂದೇ ಹೇಳಬಹುದು. ಕೆಜಿಎಫ್-2 ಮತ್ತು ಕಾಂತಾರ ಚಿತ್ರಗಳು ರಾಜ್ಯ ಮಾತ್ರವಲ್ಲದೆ ರಾಷ್ಟ್ರಮಟ್ಟದಲ್ಲೂ ಗಲ್ಲಾಪೆಟ್ಟಿಗೆಯಲ್ಲಿ ಗೆದ್ದು ಇತಿಹಾಸ ನಿರ್ಮಿಸಿದವು. 777 ಚಾರ್ಲಿ ಮತ್ತು

2022ರಲ್ಲಿ ತೆಲುಗು ಚಿತ್ರರಂಗವನ್ನು ಆಳಿದ ಟಾಪ್ 3 ನಾಯಕಿಯರಿವರು, ಪ್ರತಿ ಸಿನಿಮಾಗೆ ಪಡೆಯುವ ಸಂಭಾವನೆ ಎಷ್ಟು ಗೊತ್ತಾ?
ತೆಲುಗು ಚಿತ್ರರಂಗವು 2022 ರಲ್ಲಿ ಆರ್‌ಆರ್‌ಆರ್, ಸೀತಾ ರಾಮಂ, ಕಾರ್ತಿಕೇಯ 2, ಬಿಂಬಿಸಾರ ಮತ್ತು ಮೇಜರ್ ಸೇರಿದಂತೆ ಕೆಲವು ಸೂಪರ್‌ಹಿಟ್ ಚಲನಚಿತ್ರಗಳನ್ನು ನೀಡಿದೆ. ತೆಲುಗು ಚಿತ್ರರಂಗದಲ್ಲಿ ಮೊದಲ ಮೂರು ಸ್ಥಾನಗಳನ್ನು ತಮ್ಮದಾಗಿಸಿಕೊಂಡಿರುವ ನಟಿಯರು ಭರ್ಜರಿ ಸಂಭಾವನೆಯನ್ನೂ ಪಡೆಯುತ್ತಿದ್ದಾರೆ.

2022ರಲ್ಲಿ ಸರಣಿ ಸೋಲುಗಳಿಂದ ಕಂಗೆಟ್ಟಿದ್ದ ಬಾಲಿವುಡ್‌ನಲ್ಲಿ 100 ಕೋಟಿ ಕ್ಲಬ್ ಸೇರಿದ ಕೆಲವು ಸಿನಿಮಾಗಳಿವು!
ಬ್ಯಾಕ್-ಟು-ಬ್ಯಾಕ್ ಫ್ಲಾಪ್ ಸಿನಿಮಾಗಳ ನಡುವೆ, ಕೆಲವು ಚಿತ್ರಗಳು ಹಿಟ್ ಆಗಿ ಹೊರಹೊಮ್ಮಲು ಮತ್ತು 100 ಕೋಟಿ ರೂ. ಕ್ಲಬ್ ಸೇರುವಲ್ಲಿ ಯಶಸ್ವಿಯಾದವು. ಇನ್ನೇನು ಈ ವರ್ಷ ಮುಗಿಯುತ್ತಿದ್ದು, ಬಾಕ್ಸ್ ಆಫೀಸ್‌ನಲ್ಲಿ ಅಸಾಧಾರಣ ಪ್ರದರ್ಶನ ನೀಡಿದ ಮತ್ತು 100 ಕೋಟಿ ಕ್ಲಬ್‌ನ ಭಾಗವಾದ ಚಲನಚಿತ್ರಗಳು ಯಾವೆಂದು ನೋಡೋಣ...

ಹಿನ್ನೋಟ 2022: ಫೀಫಾ ವಿಶ್ವಕಪ್ ಗೆದ್ದ ಮೆಸ್ಸಿ, ಪ್ರಥಮಗಳಿಗೆ ನಾಂದಿ ಹಾಡಿದ ನೀರಜ್ ಸೇರಿದಂತೆ ಅತ್ಯುತ್ತಮ ಕ್ರೀಡಾ ಕ್ಷಣಗಳು!
FIFA ವಿಶ್ವಕಪ್ ಕತಾರ್ 2022 ರ ಫೈನಲ್‌ನಲ್ಲಿ ಅರ್ಜೆಂಟೀನಾ ಪೆನಾಲ್ಟಿ ಶೂಟೌಟ್‌ಗಳಲ್ಲಿ 4-2 ರಿಂದ ಫ್ರಾನ್ಸ್ ಅನ್ನು ಸೋಲಿಸಿತು. ಇದು ಈ ವರ್ಷದ ಕ್ರೀಡಾ ಕ್ಯಾಲೆಂಡರ್‌ನ ಮುಕ್ತಾಯದ ಕೊನೆಯ ಕ್ಷಣವಾಗಿದೆ.

ಕೋವಿಡ್, ಆರ್ಥಿಕ ಕುಸಿತ: 2022ರಲ್ಲಿ ಕರ್ನಾಟಕದಲ್ಲಿ ಉದ್ಯೋಗ ಕಳೆದುಕೊಂಡ ಹಲವು ಮಂದಿ, ಐಟಿ ಉದ್ಯಮದಲ್ಲಿ ಮುನ್ನಡೆ
2022 ನೇ ವರ್ಷ ಮುಗಿದು 2023ಕ್ಕೆ ಕಾಲಿಡಲು ಇನ್ನು ಕೆಲವೇ ದಿನಗಳು ಬಾಕಿ. 2022ರಲ್ಲಿ ಕೋವಿಡ್19 ಪ್ರಕರಣಗಳ ಪ್ರಮಾಣ ಸಾಕಷ್ಟು ಇಳಿಕೆಯಾದವು. ಇದರಿಂದಾಗಿ ತೀವ್ರ ಕುಸಿತ ಕಂಡಿದ್ದ ಆರ್ಥಿಕತೆ ಚೇತರಿಕೆ ಕಂಡಿತು. ಎಲ್ಲಾ ವ್ಯಾಪಾರ-ವಹಿವಾಟುಗಳು ಸಹಜ ಸ್ಥಿತಿಗೆ ಬರಲಾರಂಭಿಸಿತು. ಅಪಘಾತ, ಪ್ರಾಕೃತಿಕ ವಿಕೋಪ, ಸಾವು-ನೋವುಗಳು 20222ರಲ್ಲಿ ಕೂಡ ಸಾಕಷ್ಟು ಕಂಡವು.

2022 ಹಿನ್ನೋಟ: ದೇಶದ ರಕ್ಷಣಾ ಪಡೆಯಲ್ಲಿ ಸ್ವದೇಶಿಯತೆಗೆ ಆದ್ಯತೆ, ಅಭಿವೃದ್ಧಿ
2022 ರಲ್ಲಿ ಸಶಸ್ತ್ರ ಪಡೆಗಳು ಯುದ್ಧನೌಕೆಗಳು, ವಿಮಾನಗಳು ಮತ್ತು ಜಲಾಂತರ್ಗಾಮಿ ನೌಕೆಗಳ ಕಾರ್ಯಾರಂಭ ಮತ್ತು ಸೇರ್ಪಡೆಯೊಂದಿಗೆ ಸ್ವದೇಶಿ ನಿರ್ಮಿತಕ್ಕೆ ಹೆಚ್ಚು ಸಾಕ್ಷಿಯಾಗಿದೆ.

ಹಿನ್ನೋಟ 2022: ದಕ್ಷಿಣ ಭಾರತದ ಟಾಪ್ 10 ಆಕ್ಷನ್ ಹೀರೋಗಳು ಇವರು, ಅಗ್ರಸ್ಥಾನದಲ್ಲಿ ಯಶ್
ಕಳೆದ ದಶಕದಿಂದೀಚೆಗೆ ದಕ್ಷಿಣ ಭಾರತದ ಚತ್ರರಂಗ ತುಂಬಾ ಬೆಳೆದಿದೆ ಮತ್ತು ಹೆಚ್ಚಿನ ಬಜೆಟ್‌ನ ಆಕ್ಷನ್-ಪ್ಯಾಕ್ಡ್ ಚಲನಚಿತ್ರಗಳನ್ನು ನೀಡಿದೆ. ಉತ್ತಮ ಕಥಾಹಂದರ, ಛಾಯಾಗ್ರಹಣ ಮತ್ತು ನಿರ್ದೇಶನವನ್ನು ಹೊಂದಿರುವ ದಕ್ಷಿಣ ಭಾರತದ ಚಲನಚಿತ್ರಗಳು ನಟರ ಅಭಿನಯಗಳು ಪ್ರೇಕ್ಷಕರನ್ನು ಸೆಳೆದಿವೆ.

