ದೇಶದೇಶದಲ್ಲಿ ಕೇವಲ ಶೇ. 28 ರಷ್ಟು ಜನರಿಗೆ ಮಾತ್ರ ಕೋವಿಡ್ ಬೂಸ್ಟರ್ ಡೋಸ್
ವಿಶ್ವದ ಕೆಲವು ಕಡೆಗಳಲ್ಲಿ ದಿಢೀರ್ ಕೋವಿಡ್-19 ಪ್ರಕರಣಗಳ ಹೆಚ್ಚಳ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯಾ ಬುಧವಾರ ದೇಶದಲ್ಲಿನ ಕೋವಿಡ್ -19 ಪರಿಸ್ಥಿತಿ ಕುರಿತು ಪರಾಮರ್ಶಿಸಿದರು. ನಿಗಾ ವಹಿಸುವಂತೆ ಹಾಗೂ ಕಠಿಣ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದರು.