revenue deficit

ಭದ್ರಾ ಮೇಲ್ದಂಡೆ ಸೇರಿ ಪ್ರಮುಖ ಯೋಜನೆಗಳಿಗೆ ಅನುದಾನ ನೀಡಿಲ್ಲ; ರಾಜ್ಯದ ಆರ್ಥಿಕ ಹೊಡೆತಕ್ಕೆ ಕೇಂದ್ರವೇ ಕಾರಣ: ಸಿಎಂ ಸಿದ್ದರಾಮಯ್ಯ
ನಾನು ನಾಲ್ಕು ಬಾರಿ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ ರಾಜ್ಯದ ಪಾಲಿನ ಅನುದಾನ ಬಿಡುಗಡೆ ಮಾಡಲು ಮನವಿ ಮಾಡಿದ್ದೇನೆ. ಪ್ರತೀ ಬಾರಿಯೂ ಭರವಸೆ ನೀಡಲಾಗಿದೆ, ಆದರೆ ಕಾರ್ಯರೂಪಕ್ಕೆ ಬಂದಿಲ್ಲ, ಕೇಂದ್ರ ಸರ್ಕಾರ ರಾಜ್ಯದ ಪಾಲಿನ ಹಣವನ್ನು ನೀಡಿದ್ದರೆ ಈ ಮಟ್ಟದ ಆದಾಯ ಕೊರತೆ ಎದುರಾಗುತ್ತಿರಲಿಲ್ಲ.

2025-26 ಬಜೆಟ್‌ಗೆ ಸಿಎಂ ಸಿದ್ಧತೆ: ಆದಾಯ ಕೊರತೆ ಅನುದಾನ ಪಡೆಯುವತ್ತ ಸಿದ್ದರಾಮಯ್ಯ ಆದ್ಯತೆ; ಹಲವು ಯೋಜನೆಗಳಿಗೆ ಕತ್ತರಿ?
ಕಳೆದ ಆಗಸ್ಟ್‌ನಲ್ಲಿ 16ನೇ ಹಣಕಾಸು ಆಯೋಗದ ಅಧ್ಯಕ್ಷ ಡಾ.ಅರವಿಂದ್ ಪನಗಾರಿಯಾ ಅವರ ನೇತೃತ್ವದ ಭೇಟಿಯ ಸಂದರ್ಭದಲ್ಲಿ, ಹಣಕಾಸು ಖಾತೆಯನ್ನು ಹೊಂದಿರುವ ಸಿದ್ದರಾಮಯ್ಯ ಅವರು ರಾಜ್ಯದ ಆರ್ಥಿಕ ಪರಿಸ್ಥಿತಿಯ ವರದಿಯನ್ನು ಮಂಡಿಸಿದರು.

