ರಾಜ್ಯಮುದ್ರಾಂಕ ಮತ್ತು ನೋಂದಣಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ನೂರಾರು ಕೋಟಿ ಆದಾಯ ಖೋತ!
ರಾಜ್ಯ ಸರ್ಕಾರದ ಪ್ರಮುಖ ಆದಾಯ ಮೂಲಗಳಾದ ವಾಣಿಜ್ಯ ತೆರಿಗೆಗಳ ಇಲಾಖೆ, ಮುದ್ರಾಂಕ ಮತ್ತು ನೋಂದಣಿ ಇಲಾಖೆ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆಯಡಿ 2017-18ನೇ ಸಾಲಿನಲ್ಲಿ ರಾಜಸ್ವಕ್ಕೆ ಸಂಬಂಧಪಟ್ಟಂತೆ ಮಹಾಲೇಖಪಾಲರ ವರದಿ ಗುರುವಾರ ಮಂಡನೆಯಾಗಿದ್ದು, ನೂರಾರು ಕೋಟಿ ರೂ. ಆದಾಯ ಖೋತಾ ಆಗಿರುವುದು ವರದಿಯಲ್ಲಿ ಬಯಲಾಗಿದೆ.