ರಾಜಕೀಯ'ರಾಜಕೀಯದಿಂದ ನಿವೃತ್ತಿಯಾಗುತ್ತೇನೆ ಎಂದು ಎಲ್ಲಿ ಹೇಳಿದ್ದೇನೆ, ನಿಮ್ಮಿಷ್ಟದಂತೆ ಸುದ್ದಿ ಹಬ್ಬಿಸಬೇಡಿ': ಮಾಜಿ ಸ್ಪೀಕರ್ ಗರಂ!
ರಾಜಕೀಯದಿಂದ ನಾನು ನಿವೃತ್ತಿಯಾಗುತ್ತೇನೆ ಎಂದು ನಾನು ಎಲ್ಲಿಯೂ ಹೇಳಿಲ್ಲ, ನಿವೃತ್ತಿಯಾಗಲು ನಾನು ಈಗ ಆರಾಮಾಗಿ ಇಲ್ಲ, ಹಲವು ಜವಾಬ್ದಾರಿಗಳ ಮಧ್ಯೆ ಬಂಧಿಯಾಗಿದ್ದೇನೆ, ಈ ಸುಳ್ಳು ವದಂತಿ ನನ್ನ ಮನಸ್ಸಿಗೆ ತೀವ್ರ ಬೇಸರವನ್ನುಂಟುಮಾಡಿದೆ ಎಂದು ಮಾಜಿ ಸ್ಪೀಕರ್, ಕಾಂಗ್ರೆಸ್ ನಾಯಕ ಎಸ್ ರಮೇಶ್ ಕುಮಾರ್ ಹೇಳಿದ್ದಾರೆ.