ದೇಶದಶಕಗಳಿಂದ ಸರ್ಕಾರಿ ಬಂಗಲೆಗಳಲ್ಲಿ ಅಕ್ರಮವಾಗಿ ನೆಲೆಸಿರುವ ಜನಪ್ರತಿನಿಧಿಗಳು, ನಿವೃತ್ತ ಅಧಿಕಾರಿಗಳು!
ಸರ್ಕಾರಿ ಸೌಲಭ್ಯಗಳನ್ನು ಜನಪ್ರತಿನಿಧಿಗಳು ದುರುಪಯೋಗಪಡಿಸಿಕೊಳ್ಳುವ ಆರೋಪ ಹಿಂದಿನಿಂದಲೂ ಇದೆ. ಅದಕ್ಕೆ ಉದಾಹರಣೆಯೆಂಬಂತೆ ಇಬ್ಬರು ಸಂಸದರು, 9 ಮಾಜಿ ಸಂಸದರು, 576 ಮಂದಿ ಇತರ ನಿವೃತ್ತ ಅಧಿಕಾರಿಗಳು ಕೇಂದ್ರ ಸರ್ಕಾರದ ವಸತಿ ಮತ್ತು ನಗರಾಭಿವೃದ್ಧಿ ಇಲಾಖೆ ನೀಡುವ ಅಧಿಕೃತ ನಿವಾಸಗಳಲ್ಲಿ ಅಕ್ರಮವಾಗಿ ನೆಲೆಸಿದ್ದಾರೆ.