ದೇಶಭೂಪಾಲ್: ಕೀಚಕನನ್ನು ಅಟ್ಟಾಡಿಸಿ, ಯುವತಿಯನ್ನು ಅತ್ಯಾಚಾರದಿಂದ ಪಾರು ಮಾಡಿದ ಬೀದಿನಾಯಿ!
ನಿಯತ್ತಿಗೆ ಮತ್ತೊಂದು ಹೆಸರೇ ಶ್ವಾನ. ಈ ಶ್ವಾನ ಹೇಗೆ ಉತ್ತಮ ಸ್ನೇಹಿತ ಎಂಬುದು ಮಧ್ಯಪ್ರದೇಶದಲ್ಲಿ ನಡೆದಿರುವ ಘಟನೆಯೊಂದು ಸ್ಪಷ್ಟ ನಿದರ್ಶನ ಎಂಬಂತಿದೆ. ಬೀದಿ ನಾಯಿಯೊಂದು 29 ವರ್ಷದ ಯುವತಿಯನ್ನು ಅತ್ಯಾಚಾರದಿಂದ ಕಾಪಾಡಿದೆ.