ದೇಶಮುಂಬೈ: ಇಎಸ್ ಐಸಿ ಆಸ್ಪತ್ರೆಯಲ್ಲಿ ಬೆಂಕಿ, 6 ದುರ್ಮರಣ, 100 ಮಂದಿ ರಕ್ಷಣೆ
ವಾಣಿಜ್ಯ ರಾಜಧಾನಿ ಮುಂಬೈಯಲ್ಲಿ ಇಂದು ಸಂಜೆ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಅಂದೇರಿಯ ಮಾರೊಲ್ ನಲ್ಲಿರುವ ರಾಜ್ಯ ನೌಕರರ ವಿಮಾ ನಿಗಮ- ಇಎಸ್ ಐಸಿ ಕಾಮ್ ಗರ್ ಆಸ್ಪತ್ರೆಯಲ್ಲಿ ಆಕಸ್ಮಿಕ ಬೆಂಕಿ ಉಂಟಾಗಿದ್ದು, 6 ಮಂದಿ ಮೃತಪಟ್ಟಿದ್ದು, ಹಲವು ಮಂದಿ ಗಾಯಗೊಂಡಿದ್ದಾರೆ.