ವಿದೇಶನೈಜೀರಿಯಾದಲ್ಲಿ ಜನಾಂಗೀಯ ಹಿಂಸಾಚಾರ: 100 ಕ್ಕೂ ಹೆಚ್ಚು ಮಂದಿ ಸಾವು
ನಿರಂತರ ಧಾರ್ಮಿಕ ಮತ್ತು ಜನಾಂಗೀಯ ಉದ್ವಿಗ್ನತೆ ಪೀಡಿತ ನೈಜೀರಿಯಾ ಭೀಕರ ಹಿಂಸಾಚಾರಕ್ಕೆ ಸಾಕ್ಷಿಯಾಗಿದೆ. ಭಾನುವಾರ ಮಧ್ಯ ನೈಜೀರಿಯಾದಾದ್ಯಂತ ಸಶಸ್ತ್ರ ಗುಂಪುಗಳು ಪಟ್ಟಣಗಳನ್ನು ಗುರಿಯಾಗಿಸಿ ನಡೆಸಿದ ಸರಣಿ ದಾಳಿಯಲ್ಲಿ 100ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ.