ವಿದೇಶಮುಂದಿನ ಆಫ್ಘಾನಿಸ್ತಾನ ಸರ್ಕಾರಕ್ಕೆ ಧಾರ್ಮಿಕ ವಿದ್ವಾಂಸರ ನಾಯಕತ್ವ: ತಾಲಿಬಾನ್
ವಾರದ ಹಿಂದೆ ಉಗ್ರ ಸಂಘಟನೆ ತಾಲಿಬಾನ್ ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ನನ್ನು ವಶಕ್ಕೆ ಪಡೆದ ನಂತರ ಅಲ್ಲಿನ ಸರ್ಕಾರ ಪತನಗೊಂಡು ಅರಾಜಕತೆ, ಅಸ್ಥಿರತೆ ಉಂಟಾಗಿರುವಂತೆಯೇ, ಮುಂಬರುವ ಸರ್ಕಾರವನ್ನು ಧಾರ್ಮಿಕ ವಿದ್ವಾಂಸರು ಮುನ್ನಡೆಸಲಿದ್ದಾರೆ ಎಂದು ತಾಲಿಬಾನ್ ಹೇಳಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ.