ವಾಣಿಜ್ಯಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ಕಮ್ಯುನಿಕೇಷನ್ಸ್ ಗೆ 104 ಕೋಟಿ ರೂ. ಮರು ಪಾವತಿಸಲು ಕೇಂದ್ರಕ್ಕೆ 'ಸುಪ್ರೀಂ' ಆದೇಶ
ಉದ್ಯಮಿ ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ಕಮ್ಯುನಿಕೇಷನ್ ಗೆ 104 ಕೋಟಿ ರೂಪಾಯಿ ಹಣವನ್ನು ಮರು ಪಾವತಿಸಬೇಕು ಎಂದು ದೂರಸಂಪರ್ಕ ವಿವಾದಗಳ ಇತ್ಯರ್ಥ ಮತ್ತು ಮೇಲ್ಮನವಿ ನ್ಯಾಯಮಂಡಳಿ(ಟಿಡಿಎಸ್ಎಟಿ) ಆದೇಶವನ್ನು ಪ್ರಶ್ನಿಸಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ತಿರಸ್ಕರಿಸಿದೆ.