ಅಂಕಣಗಳುಮಕ್ಕಳನ್ನು ಬೆಳೆಸುವ Elon Musk ಅವರ ಮಾದರಿ ನಮಗೆಷ್ಟು ಪ್ರಸ್ತುತ? (ತೆರೆದ ಕಿಟಕಿ)
ಮೊದಲನೆಯದಾಗಿ, ಎಲಾನ್ ಮಸ್ಕ್ ಎಂಬ ‘ಯಶಸ್ವಿ’, ‘ದುಡ್ಡು ಮಾಡಿರುವ’ ವ್ಯಕ್ತಿ ಮಾಡಿದ ಎಂಬ ಕಾರಣಕ್ಕೆ ಎಲ್ಲವೂ ನಮಗೆ ಸಂಗತವಾಗಬೇಕಿಲ್ಲ, ಆದರ್ಶವೂ ಆಗಬೇಕಿಲ್ಲ. ಏಕೆಂದರೆ, ಹಲವು ಸಂಬಂಧಗಳಿಂದ ಹನ್ನೊಂದು ಮಕ್ಕಳನ್ನು ಪಡೆದಿರುವ ಎಲಾನ್ ಮಸ್ಕ್, ಕೌಟುಂಬಿಕವಾಗಿ ನಿಜಕ್ಕೂ ಯಶಸ್ವಿ ವ್ಯಕ್ತಿಯಾ ಎಂಬುದು ಚರ್ಚಾರ್ಹ ಪ್ರಶ್ನೆಯೇ.