ರಾಜ್ಯವಾಹನ ನೋಂದಣಿ ಫಲಕಗಳ ಮೇಲೆ ಹೆಸರು, ಚಿಹ್ನೆ ಹಾಕಿಸುವುದು ಅಪರಾಧ: ಸಾರಿಗೆ ಇಲಾಖೆ
ವಾಹನಗಳ ನೋಂದಣಿ ಫಲಕಗಳ ಮೇಲೆ ಅನಧಿಕೃತವಾಗಿ ರಾಪ್ಟ್ರೀಯ ಮಾನವ ಹಕ್ಕುಗಳ ಆಯೋಗ, ರಾಜ್ಯ ಮಾನವ ಹಕ್ಕುಗಳ ಆಯೋಗಗಳ ಹೆಸರನ್ನು ಹೋಲುವಂತಹ ರಾಪ್ಟ್ರೀಯ-ರಾಜ್ಯ ಮಾನವ ಹಕ್ಕುಗಳ ಸಂಸ್ಥೆ, ಒಕ್ಕೂಟ ಇತ್ಯಾದಿ ಹೆಸರುಗಳನ್ನು, ಚಿಹ್ನೆ, ಲಾಂಛನಗಳನ್ನು ಹಾಕಿಕೊಳ್ಳುವುದನ್ನು ಅಪರಾಧ ಎಂದು ಸಾರಿಗೆ ಇಲಾಖೆ ತಿಳಿಸಿದೆ.