ಕ್ರಿಕೆಟ್IPL 2024: ಸಿಎಸ್ಕೆ ಎದುರಿನ ನಿರ್ಣಾಯಕ ಪಂದ್ಯಕ್ಕೂ ಮುನ್ನ ಆರ್ಸಿಬಿಗೆ ದೊಡ್ಡ ಸಂಕಷ್ಟ; ಗತಿ ಏನು?
ಸಿಎಸ್ಕೆ ವಿರುದ್ಧದ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಬೃಹತ್ ಗೆಲುವು ಪಡೆದರೆ, ಪ್ಲೇಆಫ್ ಪ್ರವೇಶಿಸುವ ಸಾಧ್ಯತೆ ಇದೆ. ಈ ಮಹತ್ವದ ಪಂದ್ಯ ಗೆಲ್ಲುವ ಲೆಕ್ಕಾಚಾರದಲ್ಲಿದ್ದ ಆರ್ಸಿಬಿ ತಂಡಕ್ಕೆ ಇದೀಗ ದೊಡ್ಡ ಆಘಾತ ಎದುರಾಗಿದೆ. ಆರ್ಸಿಬಿಯ ಪ್ರಮುಖ ಆಲ್ರೌಂಡರ್ ವಿಲ್ ಜಾಕ್ಸ್ ತಂಡವನ್ನು ತೊರೆದಿದ್ದಾರೆ. ಜೂನ್ 2ರಿಂದ ಟಿ20 ವಿಶ್ವಕಪ್ ಆರಂಭವಾಗಲಿದ್ದು, ಸಿದ್ಧತೆಗಾಗಿ ಇಂಗ್ಲೆಂಡ್ ತಂಡದ ಆಟಗಾರರಾದ ವಿಲ್ ಜಾಕ್ಸ್ ಮತ್ತು ರೀಸ್ ಟೋಪ್ಲಿ ತವರಿಗೆ ಮರಳಿದ್ದಾರೆ. ಬಳಿಕ ಅವರು ಯುಎಸ್ಗೆ ಪ್ರಯಾಣ ಮಾಡಲಿದ್ದಾರೆ.