ರಾಜ್ಯಗುಪ್ತಚರ ಸಂಸ್ಥೆಯಲ್ಲಿ ಕೆಲಸ ಕೊಡಿಸುವುದಾಗಿ 30 ಮಂದಿಗೆ ವಂಚನೆ: ಬೆಂಗಳೂರಿನಲ್ಲಿ ಇಬ್ಬರ ಬಂಧನ
ಆರೋಪಿಗಳು ಬೀದರ್ನ ವೇಣುಗೋಪಾಲ್ (38) ಮತ್ತು ಆಂಧ್ರಪ್ರದೇಶದ ಅರವಿಂದ್ ನಾಯ್ಡು (36). ಆರೋಪಿಗಳು ವಂಚನೆಗೆ ಬಳಸಿದ್ದ 'ರಾ' ಸಂಸ್ಥೆಯ 86 ಲೆಟರ್ಹೆಡ್, 6 ಗುರುತಿನ ಚೀಟಿ, 6 ನಕಲಿ ನೇಮಕಾತಿ ಪತ್ರ ಹಾಗೂ 9 ನಕಲಿ ಸೀಲುಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.