ರಾಜ್ಯನನ್ನ ನಾಟಕವನ್ನು ತಿರುಚಿದವರ ವಿರುದ್ಧ ಕ್ರಮ ಕೈಗೊಳ್ಳಿ: ಡಾ.ಚಂದ್ರಶೇಖರ ಕಂಬಾರ ಆಗ್ರಹ
ಮೈಸೂರಿನ ರಂಗಾಯಣದಲ್ಲಿ ನನ್ನ ನಾಟಕ ''ಸಾಂಬಶಿವ ಪ್ರಹಸನ''ವನ್ನು ನನ್ನ ಅನುಮತಿ ಇಲ್ಲದೆ ಪ್ರದರ್ಶಿಸಿದ್ದಲ್ಲದೆ ಅಸಹ್ಯಕರವಾಗಿ ಪ್ರದರ್ಶ ಮಾಡಲಾಗಿದ್ದು, ಇದಕ್ಕೆ ಕಾರಣರಾದ ಎಲ್ಲರ ಮೇಲೂ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಚಂದ್ರಶೇಖರ ಕಂಬಾರ ಅವರು ಆಗ್ರಹಿಸಿದ್ದಾರೆ.