ರಾಜ್ಯರಂಗಭೂಮಿ ಕಲಾವಿದರಿಗೆ ಪವಿತ್ರ ಸ್ಥಳ 'ರಂಗಶಂಕರ'
ಭಾರತೀಯ ರಂಗಭೂಮಿ ಕಲಾವಿದರಿಗೆ ಪವಿತ್ರ ಸ್ಥಳವಾಗಿರುವ ರಂಗಶಂಕರ ಇದೇ ತಿಂಗಳ 27 ರಂದು 15 ವರ್ಷ ಪೂರೈಸುತ್ತಿದೆ. ಈ ಸಂದರ್ಭದಲ್ಲಿ ಗಿರೀಶ್ ಕಾರ್ನಾಡ್ ಅವರ ಒಡಕಲು ಬಿಂಬ ನಾಟಕ ಪ್ರದರ್ಶನವನ್ನು ಆಯೋಜಿಸಲಾಗುತ್ತಿದೆ. ಈ ನಾಟಕದಲ್ಲಿ ಅರುಂಧತಿ ನಾಗ್ ಪ್ರಮುಖ ಪಾತ್ರದಲ್ಲಿದ್ದಾರೆ.