Rajastan government

ಫೋನ್ ಟ್ಯಾಪಿಂಗ್ ಆರೋಪ: ರಾಜಸ್ತಾನ ಸರ್ಕಾರ ಬಳಿ ವರದಿ ಕೇಳಿದ ಕೇಂದ್ರ ಗೃಹ ಸಚಿವಾಲಯ
ರಾಜಸ್ತಾನ ರಾಜಕೀಯದಲ್ಲಿ ಮುಂದುವರಿದಿರುವ ರಾಜಕೀಯ ಅನಿಶ್ಚಿತತೆ ಮಧ್ಯೆ, ರಾಜಕೀಯ ನಾಯಕರ ಅದರಲ್ಲೂ ವಿರೋಧ ಪಕ್ಷ ಬಿಜೆಪಿ ನಾಯಕರ ಫೋನ್ ಸಂಭಾಷಣೆಗಳನ್ನು ಕದ್ದಾಲಿಸಲಾಗುತ್ತಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವಾಲಯ ರಾಜಸ್ತಾನ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಬಳಿ ವರದಿ ಕೇಳಿದೆ.

2019ರಿಂದ ಸರ್ಕಾರ ಉರುಳಿಸಲು ಸಚಿನ್ ಪೈಲಟ್ ಯತ್ನ, 1.5 ವರ್ಷದಿಂದ ಅವರ ಜೊತೆ ಮಾತನಾಡಿಲ್ಲ: ಅಶೋಕ್ ಗೆಹ್ಲೊಟ್
ಕಾಂಗ್ರೆಸ್ ನಿಂದ ಉಚ್ಛಾಟಿತಗೊಂಡಿರುವ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ 2019ರಿಂದಲೇ ಸರ್ಕಾರವನ್ನು ಉರುಳಿಸಲು ಬಿಜೆಪಿ ಜೊತೆ ಸೇರಿ ಪ್ರಯತ್ನಪಡುತ್ತಿದ್ದರು ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೊಟ್ ಮತ್ತೊಮ್ಮೆ ಆರೋಪ ಮಾಡಿದ್ದಾರೆ.

ರಾಜಸ್ತಾನ ಸರ್ಕಾರ ಉರುಳಿಸಲು ಪಿತೂರಿ ಆರೋಪ: ಸಂಜಯ್ ಜೈನ್ ಬಂಧನ
ರಾಜಸ್ತಾನದಲ್ಲಿ ಅಶೋಕ್ ಗೆಹ್ಲೊಟ್ ನೇತೃತ್ವದ ಸರ್ಕಾರವನ್ನು ಉರುಳಿಸಲು ಕಾಂಗ್ರೆಸ್ ಶಾಸಕರ ಖರೀದಿಗೆ ಕುದುರೆ ವ್ಯಾಪಾರ ನಡೆಸಲು ಮುಂದಾಗಿದ್ದರು ಎಂಬ ಆರೋಪಕ್ಕೆ ಪುಷ್ಠಿ ನೀಡುವ ಆಡಿಯೊ ಕ್ಲಿಪ್ ವೈರಲ್ ಆದ ಹಿನ್ನೆಲೆಯಲ್ಲಿ ರಾಜಸ್ತಾನ ಪೊಲೀಸ್ ಇಲಾಖೆಯ ವಿಶೇಷ ಕಾರ್ಯಗುಂಪು (ಎಸ್ಒಜಿ) ಸಂಜಯ್ ಜೈನ್ ಅವರನ್ನು ಬಂಧಿಸಿದೆ.

ರಾಜಸ್ತಾನ ಸರ್ಕಾರ ಉರುಳಿಸಲು ಬಿಜೆಪಿ ಯತ್ನ? ಕಾಂಗ್ರೆಸ್ ಶಾಸಕರು ರೆಸಾರ್ಟ್ ಗೆ, ಎಸಿಬಿಗೆ ಪತ್ರ ಬರೆದ ಮುಖ್ಯ ಸಚೇತಕ
ಮಧ್ಯಪ್ರದೇಶದ ನಂತರ ರಾಜಸ್ತಾನ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ರಾಜಸ್ತಾನ ಸರ್ಕಾರದ ದುರುದ್ದೇಶಪೂರಿತ ಆಪಾದನೆಯ ಪ್ರಯತ್ನ: ರಾಬರ್ಟ್ ವಾದ್ರಾ
ಬಿಕನೇರ್ ನಲ್ಲಿ ಅಕ್ರಮ ಭೂ ಹಗರಣ ಸಂಬಂಧ ವಿಚಾರಣೆ ನಡೆಸಲು ಸಿಬಿಐಗೆ ರಾಜಸ್ತಾನ ಸರ್ಕಾರ ಮಾಡಿರುವ ಶಿಫಾರಸನ್ನು ಟೀಕಿಸಿರುವ...

