ಜೀವನಶೈಲಿಸ್ಲಿಮ್ ಆಗಲು ಬಯಸುವಿರಾ? ಹಾಗಿದ್ದರೆ, ಕಲರ್ ಕಲರ್ ಆಹಾರ ತಿನ್ನಿ, Rainbow diet ಅನುಸರಿಸಿ...
ಇತ್ತೀಚಿನ ಕೆಲವು ವರ್ಷಗಳಿಂದ ಜನರು ಮಾಡುವ ಡಯೆಟ್ ತನ್ನ ಮೂಲಾರ್ಥವನ್ನೇ ಕಳೆದುಕೊಂಡಂತೆ ಕಾಣುತ್ತಿದೆ. ದೇಹವನ್ನು ಅತಿಯಾಗಿ ಅಗ್ನಿಪರೀಕ್ಷೆಗೆ ಒಳಪಡಿಸುವುದೇ ಡಯೆಟ್ ಅಲ್ಲ. ರುಚಿಯಿಲ್ಲದ ಆಹಾರವನ್ನು ಅಲ್ಪ ಪ್ರಮಾಣದಲ್ಲಿ ಸೇವಿಸುವುದೇ ಡಯೆಟ್ ಅಲ್ಲ. ಶರೀರವನ್ನು ಗುರುತರವಾಗಿ ದಂಡಿಸುವುದು, ಕಠಿಣವಾದ ತಪಸ್ಸಿನಂತೆ ಆಹಾರದಿಂದ ಆಗಾಗ ದೂರವಿರುವುದು...