railway stations

ರೈಲು ನಿಲ್ದಾಣದ ಮಳಿಗೆಗಳ ಮೇಲೆ ಆಹಾರ ಇಲಾಖೆ ದಿಢೀರ್ ದಾಳಿ: ಅವಧಿ ಮೀರಿದ ಉತ್ಪನ್ನಗಳು, ನಿಷೇಧಿತ ಬಣ್ಣಗಳು ಪತ್ತೆ!
ಕರ್ನಾಟಕದ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯು 36 ರೈಲು ನಿಲ್ದಾಣಗಳಲ್ಲಿರುವ ಆಹಾರ ಮಳಿಗೆಗಳಲ್ಲಿ ನಡೆಸಿದ ವಿಶೇಷ ತಪಾಸಣೆಯಲ್ಲಿ ಸಿಹಿತಿಂಡಿಗಳಲ್ಲಿ ಅನುಮತಿಯಿಲ್ಲದ ಬಣ್ಣಗಳ ಬಳಕೆ, ಅವಧಿ ಮೀರಿದ ಡೈರಿ ಉತ್ಪನ್ನಗಳು ಮತ್ತು ಆಹಾರ ಪದಾರ್ಥಗಳು ಮತ್ತು ಕೊಳೆತ ತರಕಾರಿಗಳು ಪತ್ತೆಯಾಗಿದೆ.

ರಾಜ್ಯದ ನಾಲ್ಕು ರೈಲು ನಿಲ್ದಾಣಗಳಿಗೆ ಸಂತರ ಹೆಸರಿಡಲು ಪ್ರಸ್ತಾವನೆ: ಶೀಘ್ರವೇ ಅನುಮೋದನೆ ನೀಡುವಂತೆ ಒತ್ತಾಯ
ಈ ನಾಲ್ಕು ನಿಲ್ದಾಣಗಳಿಗೆ ಪೂಜ್ಯ ಸಂತರ ಹೆಸರಿಡಲು ರಾಜ್ಯ ಸರ್ಕಾರ ಶಿಫಾರಸು ಮಾಡಿದೆ ಮತ್ತು ಇದಕ್ಕೆ ಕೇಂದ್ರ ಗೃಹ ಸಚಿವಾಲಯದ ಅನುಮೋದನೆ ಅಗತ್ಯವಿದೆ ಎಂದು ಅವರು ವಿವರಿಸಿದರು.

ನೈರುತ್ಯ ರೈಲ್ವೆಯ 15 ರೈಲು ನಿಲ್ದಾಣಗಳು ಮೇಲ್ದರ್ಜೆಗೆ: ಕಾಮಗಾರಿಗಳಿಗೆ ಫೆ.26ಕ್ಕೆ ಪ್ರಧಾನಿ ಮೋದಿ ಚಾಲನೆ
ಅಮೃತ್ ಭಾರತ್ ನಿಲ್ದಾಣ ಯೋಜನೆಯಡಿ 372.13 ಕೋಟಿ ರೂಪಾಯಿ ವೆಚ್ಚದಲ್ಲಿ 15 ರೈಲು ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸಲಾಗುತ್ತಿದೆ ಎಂದು ನೈಋತ್ಯ ರೈಲ್ವೆ ಶುಕ್ರವಾರ ಮಾಹಿತಿ ನೀಡಿದೆ.

ರೈಲ್ವೆ ನಿಲ್ದಾಣಗಳಲ್ಲಿ ಮೋದಿ ಜೊತೆ ಸೆಲ್ಫಿ ಸ್ಪಾಟ್: ಸ್ವ-ಪ್ರಚಾರದ ಗೀಳಿಗೆ ಮಿತಿಯೇ ಇಲ್ವಾ?- ಖರ್ಗೆ
ದಿನದಿಂದ ಹೆಚ್ಚುತ್ತಿರುವ ಪ್ರಧಾನಿ ಮೋದಿ ಅವರ ಜನಪ್ರಿಯತೆಯನ್ನು ಇನ್ನಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ದೇಶಾದ್ಯಂತ ರೈಲ್ವೆ ನಿಲ್ದಾಣಗಳಲ್ಲಿ ಸೆಲ್ಫಿ ಬೂತ್ ಗಳನ್ನು ಸ್ಥಾಪಿಸಲಾಗುತ್ತಿದೆ.

ಅಮೃತ್ ಭಾರತ್ ನಿಲ್ದಾಣ ಯೋಜನೆ: ಕೆಆರ್ ಪುರಂ, ವೈಟ್ಫೀಲ್ಡ್ ಸೇರಿದಂತೆ 15 ರೈಲು ನಿಲ್ದಾಣಗಳ ನವೀಕರಣ
ಬೆಂಗಳೂರಿನ ಹೊರವಲಯದಲ್ಲಿರುವ ರೈಲು ನಿಲ್ದಾಣಗಳು ‘ಅಮೃತ್ ಭಾರತ್ ನಿಲ್ದಾಣ ಯೋಜನೆ’ ಅಡಿಯಲ್ಲಿ ಹೊಸ ರೂಪ ಪಡೆಯಲು ಸಿದ್ಧವಾಗಿವೆ ಎಂದು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಯೋಗೇಶ್ ಮೋಹನ್ ಹೇಳಿದ್ದಾರೆ.

ತಾಯಂದಿರಿಗೆ ಸಿಹಿಸುದ್ದಿ: ಬೆಂಗಳೂರು ವಿಭಾಗದ ಎಂಟು ರೈಲ್ವೆ ನಿಲ್ದಾಣಗಳಲ್ಲಿ ಶಿಶು ಆಹಾರ ಕೊಠಡಿಗಳ ಸ್ಥಾಪನೆ
ಬೆಂಗಳೂರು ವಿಭಾಗದ ಪ್ರಮುಖ ರೈಲು ನಿಲ್ದಾಣಗಳ ಮೂಲಕ ಪ್ರಯಾಣಿಸುವ ಯುವ ತಾಯಂದಿರಿಗೆ ರೈಲ್ವೆ ಇಲಾಖೆ ಸಿಹಿಸುದ್ದಿ ನೀಡಿದೆ. ಅವರು ಇನ್ಮುಂದೆ ತಮ್ಮ ಶಿಶುಗಳಿಗೆ ಖಾಸಗಿಯಾಗಿ ಮತ್ತು ಕಂಫರ್ಟ್ ಆಗಿ ಆಹಾರ ನೀಡಬಹುದಾಗಿದೆ.

ಬೆಂಗಳೂರು ರೈಲ್ವೇ ನಿಲ್ದಾಣಕ್ಕೆ ಹೈಟೆಕ್ ಟಚ್; ಸ್ಟೇಷನ್ ಗೋಡೆಗಳ ಮೇಲೆ ಅರಳಲಿವೆ ಬಣ್ಣ ಬಣ್ಣದ ಚಿತ್ತಾರ
ಬೆಂಗಳೂರು ರೈಲ್ವೆ ನಿಲ್ದಾಣಕ್ಕೆ ಮತ್ತಷ್ಟು ಹೈಟೆಕ್ ಟಚ್ ನೀಡಲು ಚಿಂತನೆಗಳು ನಡೆಯುತ್ತಿದ್ದು, ನಿಲ್ದಾಣದಲ್ಲಿ ಅಂದವಾದ ಚಿತ್ರಗಳ ಬಿಡಿಸಿ, ಜನರನ್ನು ಆಕರ್ಷಿಸಲು ಅಧಿಕಾರಿಗಳು ಮುಂದಾಗಿದ್ದಾರೆ.

ಬೆಂಗಳೂರಿನ 10 ರೈಲು ನಿಲ್ದಾಣಗಳಲ್ಲಿ 701 ಸಿಸಿಟಿವಿ ಕ್ಯಾಮೆರಾಗಳ ಪೈಕಿ 167 ಕಾರ್ಯನಿರ್ವಹಿಸುತ್ತಿಲ್ಲ!
ಬೆಂಗಳೂರು ರೈಲ್ವೆ ವಿಭಾಗದ ರೈಲು ನಿಲ್ದಾಣಗಳಲ್ಲಿ ಭದ್ರತಾ ವ್ಯವಸ್ಥೆ ಆಘಾತಕಾರಿ ಸ್ಥಿತಿಯಲ್ಲಿದೆ. ಹತ್ತು ಪ್ರಮುಖ ರೈಲು ನಿಲ್ದಾಣಗಳಲ್ಲಿ ಅಳವಡಿಸಲಾಗಿರುವ 701 ಸಿಸಿಟಿವಿ ಕ್ಯಾಮೆರಾಗಳಲ್ಲಿ 167 ಕಾರ್ಯನಿರ್ವಹಿಸುತ್ತಿಲ್ಲ.

ರೈಲು ನಿಲ್ದಾಣ, ಅಮಿತಾಬ್ ಬಚ್ಚನ್ ಮನೆಗೆ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಕರೆ: ಇಬ್ಬರ ಬಂಧನ
ವಾಣಿಜ್ಯ ನಗರಿ ಮುಂಬೈನ ಮೂರು ಪ್ರಮುಖ ರೈಲು ನಿಲ್ದಾಣಗಳು ಹಾಗೂ ಬಾಲಿವುಡ್ ನಟ ಅಮಿತಾಭ್ ಬಚ್ಚನ್ ನಿವಾಸದಲ್ಲಿ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಕರೆ ಬಂದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದಾರೆಂದು ಶನಿವಾರ ತಿಳಿದುಬಂದಿದೆ.

